ಇಂದು ಸಂಜೆ ನಿತೀಶಕುಮಾರ ಪ್ರಮಾಣ ವಚನ

211

ಪ್ರಜಾಸ್ತ್ರ ಸುದ್ದಿ

ಪಾಟ್ನಾ: ಬಿಹಾರದ ಎನ್ ಡಿಎ ಮೈತ್ರಿಕೂಟದ ಶಾಸಕಾಂಗ ಪಕ್ಷದ ನಾಯಕನಾಗಿ ನಿತೀಶಕುಮಾರ ಆಯ್ಕೆಯಾಗಿದ್ದು, ಇಂದು ಸಂಜೆ ನಡೆಯುವ ಸಮಾರಂಭದಲ್ಲಿ 4ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇಂದು ಸಂಜೆ 4.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ನಿತೀಶಕುಮಾರ 4ನೇ ಬಾರಿಗೆ ಬಿಹಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಇದಕ್ಕೂ ಮೊದ್ಲು ಅವರು, ತಮ್ಮ ಜೆಡಿಯು ಪಕ್ಷ ಅಂದುಕೊಂಡಷ್ಟು ಸ್ಥಾನಗಳಲ್ಲಿ ಗೆಲುವು ದಾಖಲಿಸಿಲ್ಲವೆಂದು ಸಿಎಂ ಆಗಲು ಹಿಂದೇಟು ಹಾಕಿದ್ರು.

ಆದ್ರೆ, ಕೇಂದ್ರ ಸಚಿವ ರಾಜನಾಥ ಸಿಂಗ್ ನೇತೃತ್ವದಲ್ಲಿ ನಡೆದ ಎನ್ ಡಿಎ ಪಕ್ಷಗಳ ಶಾಸಕಾಂಗ ಸಭೆಯಲ್ಲಿ ನಿತೀಶಕುಮಾರ ಮನವೊಲಿಸಿದ್ರು. ಬಿಜೆಪಿ, ವಿಐಪಿ, ಎಚ್ಎಎಂ ಹಾಗೂ ಜೆಡಿಯು ಪಕ್ಷದ ಶಾಸಕರು ಇವರನ್ನ ಆಯ್ಕೆ ಮಾಡಿದ್ದು, 4ನೇ ಬಾರಿಗೆ ಸಿಎಂ ಸ್ಥಾನ ಅಲಂಕರಿಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!