ಬಿಸಿಸಿಐ ಮನವಿ ತಿರಸ್ಕರಿಸಿ ನಾಯಕತ್ವ ತೊರೆದ ಕೊಹ್ಲಿ

227

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ವಿಶ್ವ ಕ್ರಿಕೆಟ್ ಜಗತ್ತು ಕಂಡ ಅದ್ಭುತ ಆಟಗಾರ ಇಂಡಿಯನ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಟೆಸ್ಟ್ ತಂಡದ ನಾಯಕತ್ವದಿಂದಲೂ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಅಭಿಮಾನಿಗಳು, ಕ್ರೀಡಾ ಪಂಡಿತರು ಹಲವು ರೀತಿಯ ಚರ್ಚೆ ನಡೆಸಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ನಿರ್ದೇಶಕ ಜೈ ಶಾ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ.

ಮೂರು ತಿಂಗಳ ಅಂತರದಲ್ಲಿ ಮೂರು ಮಾದರಿಯ ಕ್ರಿಕೆಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ. ಅಲ್ದೇ, ಐಪಿಎಲ್ ನಲ್ಲಿ ಆರ್ ಸಿಬಿ ತಂಡದ ನಾಯಕತ್ವಕ್ಕೂ ಗುಡ್ ಬೈ ಹೇಳಿರುವುದು ಹಳೆಯ ಸುದ್ದಿಯಾದರೂ ಈ ವರ್ಷದಲ್ಲಿ ಕೊಹ್ಲಿ ಕ್ರಿಕೆಟ್ ಬದುಕಿನಲ್ಲಿ ಇಳಿತಗಳನ್ನೇ ಹೆಚ್ಚು ಕಂಡಿದ್ದಾರೆ. ಬಿಸಿಸಿಐ ಜೊತೆ ಮಾತುಕತೆ ನಡೆಸಿ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವ ತೇಜ್ಯಿಸಿದ್ದಾರೆ.

ಹೀಗೆ ಹಠಾತ್ ನಾಯಕತ್ವದಿಂದ ಕೆಳಗೆ ಇಳಿದ ಕೊಹ್ಲಿಗೆ ವಿದಾಯದ ಪಂದ್ಯವಾಡಿ ಎಂದು ಬಿಸಿಸಿಐ ಮನವಿ ಮಾಡಿಕೊಂಡಿತ್ತು ಎಂದು ತಿಳಿದು ಬಂದಿದೆ. ಆದರೆ, ಕೊಹ್ಲಿ ಕೇರ್ ಮಾಡದೆ ನಯವಾಗಿ ತಿರಸ್ಕರಿಸಿದ್ದಾರೆ. ಒಂದು ಪಂದ್ಯದಿಂದ ಏನೋ ದೊಡ್ಡ ಪರಿಣಾಮವಾಗುವುದಿಲ್ಲ. ನಾನು ಇರುವುದೆ ಹೀಗೆ ಎಂದು ಹೇಳಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

ಭಾರತ ತಂಡ ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಇದು ಕೊಹ್ಲಿಗೆ 100 ಟೆಸ್ಟ್ ಪಂದ್ಯ ಸಹ ಆಗಿದೆ. ಕೊಹ್ಲಿ ನಾಯಕನಾಗಿ 68 ಟೆಸ್ಟ್ ಪಂದ್ಯಗಳಲ್ಲಿ 40 ಗೆದ್ದಿದ್ದಾರೆ. 11 ಡ್ರಾ ಆಗಿವೆ. 17 ಸೋಲು ಅನುಭವಿಸಿದ್ದಾರೆ. 16 ಟೆಸ್ಟ್ ಪಂದ್ಯಗಳನ್ನು ವಿದೇಶದಲ್ಲಿ ಗೆದ್ದಿರುವುದು ದೊಡ್ಡ ಸಾಧನೆಯಾಗಿದೆ. ಈಗ ಟೆಸ್ಟ್ ತಂಡದ ನೂತನ ಸಾರಥಿ ಯಾರು ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!