ರಾತ್ರಿ 11.30ರಿಂದ ವಾಟ್ಸಪ್ ಬಂದ್ ಆಗಲ್ಲ..!

462

ಪ್ರತಿದಿನ ರಾತ್ರಿ 11.30ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಟ್ಸಪ್ ಅಪ್ಲಿಕೇಷನ್ ವರ್ಕ್ ಆಗಲ್ಲ. ಇದು ಕೇಂದ್ರ ಸರ್ಕಾರದಿಂದ ಘೋಷಿಸಲಾಗಿದೆ ಅನ್ನೋ ಸಂದೇಶ ಎಲ್ಲೆಡೆ ಹರಿದಾಡ್ತಿದೆ. ಇದಕ್ಕೆ ಕಾರಣವಾಗಿದ್ದು ನಿನ್ನೆ ಸಂಜೆ ಸೋಷಿಯಲ್ ಮೀಡಿಯಾ ಒಂದಿಷ್ಟು ಸಮಸ್ಯೆ ಎದುರಿಸಿದೆ. ಆದ್ರೆ, ಅದೀಗ ಕಂಪ್ಲೀಟ್ ರೆಡಿಯಾಗಿದ್ದು, ಎಂದನಂತೆ ಫೇಸ್ ಬುಕ್, ವಾಟ್ಸಪ್, ಟ್ವೀಟರ್, ಇನ್ ಸ್ಟಾಗ್ರಾಮ್ ವರ್ಕ್ ಆಗ್ತಿವೆ.

ಈ ಸಮಸ್ಯೆ ಕಾಣಿಸಿಕೊಂಡ ಕೆಲ ಗಂಟೆಗಳಲ್ಲಿಯೇ ಸಮಸ್ಯೆ ಬಗೆಹರಿಸುವುದಾಗಿ ಸೋಷಿಯಲ್ ಮೀಡಿಯಾಗಳು ಹೇಳಿದ್ವು. ಇದೀಗ ಎಲ್ಲವೂ ಸರಿ ಹೋಗಿದೆ. ಯಾವುದೇ ಸಮಸ್ಯೆವಿಲ್ಲ. ಎಂದಿನಂತೆ ಎಲ್ಲವೂ ಕಾರ್ಯನಿರ್ವಹಿಸ್ತಿದೆ. ತೊಂದರೆ ಅನುಭವಿಸಿದ ಗ್ರಾಹಕರಲ್ಲಿ ಕ್ಷಮೆಯನ್ನ ಕೇಳಲಾಗಿದೆ.

ಕಳೆದ ರಾತ್ರಿಯಿಂದ ಎಲ್ಲರ ವಾಟ್ಸಪ್ ಗೆ ಸಂದೇಶವೊಂದು ಬಂದಿದ್ದು, ಇನ್ಮುಂದೆ ರಾತ್ರಿ 11.30ರಿಂದ ಬೆಳಗ್ಗೆ 6ಗಂಟೆಯ ತನಕ ವಾಟ್ಸಪ್ ವರ್ಕ್ ಆಗಲ್ಲ. ಇದು ಕೇಂದ್ರ ಸರ್ಕಾರ ಘೋಷಿಸಿದೆ. ಕಾರಣ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ ಅನ್ನೋ ಸಂದೇಶ ಹರಿದಾಡ್ತಿದೆ. ಆದ್ರೆ, ಇದುವರೆಗೂ ಈ ರೀತಿಯ ಘೋಷಣೆ ಕೇಂದ್ರದಿಂದ ಆಗಿಲ್ಲ.




Leave a Reply

Your email address will not be published. Required fields are marked *

error: Content is protected !!