ಕಂಚಿನ ಪದಕಕ್ಕೆ ಮೇರಿ ಕೋಮ್ ತೃಪ್ತಿ

340

ರಷ್ಯಾ: ಉಡಾನ್ ಉಡೆಯಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮೇರಿ ಕೋಮ್ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯ್ತು. ಸೆಮಿಫೈನಲ್ ವೇಳೆ ಟರ್ಕಿಯ ಬುಸೆನಾಜ್ ಕ್ಯಾಕಿರುಗ್ಲು ಎದುರು ಸೋಲುಂಡ ಮೇರಿಗೆ ಕಂಚಿನ ಪದಕ ಒಲಿಯಿತು.

51 ಕೆಜಿ ವಿಭಾಗದಲ್ಲಿ ನಡೆದ ಸೆಮಿ ಫೈಟ್ ನಲ್ಲಿ 3ನೇ ರ್ಯಾಂಕ್ ಹೊಂದಿರುವ ಮೇರಿ ಕೋಮ್ 2ನೇ ರ್ಯಾಂಕ್ ನಲ್ಲಿರುವ ಕ್ಯಾಕಿರುಗ್ಲು ಎದುರು 1-4 ಅಂತರದಿಂದ ಸೋಲು ಅನುಭವಿಸಿದ್ರು. 51 ಕೆಜಿ ವಿಭಾಗದಲ್ಲಿ ಮೇರಿ ಕೋಮ್ ಪಡೆದ ಮೊದಲ ಕಂಚಿನ ಪದಕವಾಗಿದೆ. 6 ಚಾಂಪಿಯನ್ ಶಿಪ್ ಪದಕ, ಒಲಂಪಿಕ್ ಕಂಚಿನ ಪದಕ, ಐದು ಏಷನ್ ಪ್ರಶಸ್ತಿ, ಏಷನ್ ಗೇಮ್ ಹಾಗೂ ಕಾಮನ್ವೆಲ್ತ್ ಗಳಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾರೆ. ಇಂಟರ್ ನ್ಯಾಷನಲ್ ಮಟ್ಟದಲ್ಲಿ ಮೇರಿ ಹಲವು ಬಾರಿ ಟಾಪ್ ಲಿಸ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!