ಕವಿ ಕಣವಿ ಅಂತಿಮ ದರ್ಶನ ಪಡೆಯುತ್ತಿರುವ ಗಣ್ಯರು

251

ಪ್ರಜಾಸ್ತ್ರ ಸುದ್ದಿ

ಧಾರವಾಡ: ಚೆಂಬೆಳಕಿನ ಕವಿ ನಾಡೋಜ ಡಾ.ಚೆನ್ನವೀರ ಕಣವಿ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. 93 ವರ್ಷದ ಅವರು, ವಯೋಸಹಜ ಕಾಯಿಲೆಯಿಂದ ಬಳುತ್ತಿದ್ದುರ. ಜನವರಿ 14ರಿಂದ ಎಸ್ ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದು, ರಾಜಕೀಯ ಗಣ್ಯರು, ಸಾಹಿತಿಗಳು, ಸ್ವಾಮೀಜಿಗಳು ಸೇರಿದಂತೆ ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಕಲ್ಯಾಣ ನಗರದಲ್ಲಿರುವ ಅವರ ನಿವಾಸಕ್ಕೆ ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧರಾಜಯೋಗಿಂದ್ರ ಸ್ವಾಮಿಜಿ, ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮಿಜಿ, ಬೆಳಗಾವಿ ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮಿಜಿ, ಸಾಹಿತಿ ಗುರುಲಿಂಗ ಕಾಪಸೆ, ಜಿ.ಟಿ.ಹೆಗೆಡೆ, ಮಾಜಿ ಶಾಸಕ  ಬೆಲ್ಲದ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಅವರ ಸಂಬಂಧಿಕರು, ಸ್ನೇಹಿತರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ನಾಡಿನ ಶ್ರೇಷ್ಠ ಕವಿ ನಾಡೋಜ ಡಾ.ಚನ್ನವೀರ ಕಣವಿ ಅವರು ಪ್ರಾಚೀನ ಸಾಹಿತ್ಯದ ಆಧುನಿಕ ಕಾಲದ ಪರಂಪರೆಯ ಕೊಂಡಿಯಂತೆ ಸಾಹಿತ್ಯ ಸೃಷ್ಟಿಗಾಗಿ ಕೆಲಸ ಮಾಡಿದ್ದರು. ಇಂಥ ಸಾಧನೆ ಮಾಡಿದ್ದ ಅವರು, ಶಿಸ್ತು ಸೌಜನ್ಯದ ವ್ಯಕ್ತಿಯಾಗಿದ್ದರು. ಕಣವಿ ಅವರ ನಾಡು ನುಡಿಯ ಸೇವೆ ಮತ್ತು ಕಾಳಜಿ ಅನನ್ಯವಾಗಿದೆ. ನಮ್ಮ ಸರಕಾರ ಕರ್ನಾಟಕ ಎಂಬ ನಾಮಕರಣ ಮಾಡಿದ ಸಮಯದಲ್ಲಿ ಕಣವಿ ತಮ್ಮ ಕವಿತೆಯ ಮೂಲಕ ಜನರಿಗೆ ತಿಳಿಸಿದರು. ರಾಜ್ಯದ ಆಡಳಿತ ಭಾಷೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ‌ ದೊರೆಯಬೇಕು ಎಂದು ಆಶಯ ಹೊಂದಿದ್ದರು. ಸರ್ಕಾರ ಅವರ ಆಶಯ ಇಡೆರಿಸುವ ಕೆಲಸ ಮಾಡಬೇಕು. ಸರಕಾರ ಕಣವಿ ಅವರಿಗೆ ಮರಣೋತ್ತರ ರಾಷ್ಟ್ರ ಕವಿ ಪ್ರಶಸ್ತಿ ಘೋಷಣೆ ಮಾಡಬೇಕು. ಕರ್ನಾಟಕ ರತ್ನ ಪ್ರಶಸ್ತಿಯನ್ನು ಸಹ ನೀಡಬೇಕು ಎಂದು ಶ್ರೀಗಳು ಮನವಿ ಮಾಡಿದರು.

ಕನ್ನಡ ಸಾಹಿತ್ಯದ ಕಳಸದಂತಿದ್ದ ಚೆಂಬೆಳಕಿನ ಕವಿ ನಾಡೋಜ ಡಾ.ಚನ್ನವೀರ ಕಣವಿ ಅವರ ನಿಧನವು ಇಡೀ ರಾಜ್ಯಕ್ಕೆ ತುಂಬಲಾರದಷ್ಟು ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕಣವಿ ಅವರ ಕುಟುಂಬಸ್ಥರಿಗೆ ಹಾಗೂ ಸಾರಸ್ವತ ಲೋಕಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ.

-ಅಮೃತ ದೇಸಾಯಿ, ಧಾರವಾಡ ಶಾಸಕರು



Leave a Reply

Your email address will not be published. Required fields are marked *

error: Content is protected !!