2020ರಲ್ಲಿ ‘WWE’ಗೆ ಗುಡ್ ಬೈ ಹೇಳಿದವರು…

316

ಪ್ರಜಾಸ್ತ್ರ ಕ್ರೀಡಾ ಸುದ್ದಿ

2020 ಇನ್ನೇನು ಮುಗಿಯಲು ಬಂದಿದೆ. ಈ ವರ್ಷ ಏಳುಗಳಿಗಿಂತ ಬೀಳುಗಳನ್ನ ಕಂಡಿದ್ದೇ ಹೆಚ್ಚು. ಹೀಗಾಗಿ ಯಾವುದೇ ಕ್ಷೇತ್ರದಲ್ಲಿ ಹೊಸದೇನೂ ಆಗಿಲ್ಲ. ಮನರಂಜನೆ ಕ್ಷೇತ್ರಗಳಲ್ಲಿ ಒಂದಾಗಿರುವ ಕ್ರೀಡಾ ಪ್ರಪಂಚ ಸಹ ಸೈಲೆಂಟ್ ಆಯ್ತು. ಇದರ ನಡುವೆ ಹಲವರು ನಿವೃತ್ತಿ ಘೋಷಿಸಿದ್ರು. ಅದರಲ್ಲಿ ಡಬ್ಲುಡಬ್ಲುಇ ಆಟ ಕೂಡಾ ಒಂದು.

ಕರೋನಾದಿಂದಾಗಿ ವೀಕ್ಷಕರಿಲ್ಲದೆ ಸ್ಪೋರ್ಟ್ಸ್ ನಡೆಸುವುದು ದೊಡ್ಡ ಸವಾಲಿನ ಕೆಲಸ. ಅದು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಗಿದೆ. ಆದ್ರೆ, ಡಬ್ಲುಡಬ್ಲುಇ ಆಟದಲ್ಲಿ ಪ್ರೇಕ್ಷಕರಿಲ್ಲದೆ ನಡೆಯೋದು ಕಷ್ಟಸಾಧ್ಯ. ಇಂಥಾ ಆಟದ ಸ್ಟಾರ್ ಪ್ಲೇಯರ್ ಗಳಾದ ರೋಪ್ ಕಿಂಗ್ ಖ್ಯಾತಿಯ ರೇ ಮಿಸ್ಟೀರಿಯೋ, ದ್ ಫಿನಾಮ್ ಅಂಡರ್ ಟೇಕರ್ ನಿವೃತ್ತಿ ಘೋಷಿಸಿದ್ದಾರೆ.

ರೇ ಮಿಸ್ಟೀರಿಯೋ ಮೇ 26 ರಂದು ರಿಂಗ್ ನಿಂದ ದೂರ ಸರಿದ್ರೆ ಅಂಡರ್ ಟೇಕರ್ ನವೆಂಬರ್ 23ರಂದು ಆಟಕ್ಕೆ ಗುಡ್ ಬೈ ಹೇಳಿದ್ರು. 55 ವರ್ಷದ ಬಳಿಕ ರಿಂಗ್ ನಲ್ಲಿ ಆಡುವುದು ಕಷ್ಟ. ಹೀಗಾಗಿ ಅಂಡರ್ ಟೇಕರ್ ವಿದಾಯ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!