ಒಬ್ಬ ಸ್ಟಾರ್ ಡೈರೆಕ್ಟರ್.. ಇಬ್ಬರು ಸ್ಟಾರ್ ಆ್ಯಕ್ಟರ್ಸ್…

731

ಸೌಥ್ ಸಿನಿ ದುನಿಯಾದಲ್ಲಿ ರಾಜಮೌಳಿ ಸಿನಿಮಾಗಳು ಅಂದ್ರೆ ಸಾಕು, ಅದೊಂದು ಹವಾ ಕ್ರಿಯೇಟ್ ಆಗುತ್ತೆ. ಸ್ಟಾರ್ ಡೈರೆಕ್ಟರ್ ಲಿಸ್ಟ್ ನಲ್ಲಿರುವ ರಾಜಮೌಳಿ ಇದೀಗ RRR ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಮಲ್ಟಿ ಸ್ಟಾರ್ ನಟರ ಮೂವಿ ಈಗಾಗ್ಲೇ ಭರ್ಜರಿ ಸೌಂಡ್ ಮಾಡ್ತಿದೆ. ಇದರ ಜೊತೆಗೆ ಇದೀಗ ಮತ್ತೊಂದು ಸುದ್ದಿ ಹರಿದಾಡ್ತಿದೆ.

ನಿರ್ದೇಶಕ ರಾಜಮೌಳಿ ಮುಂದಿನ ಚಿತ್ರದಲ್ಲಿ ಸ್ಟಾರ್ ನಟರಾದ ಪ್ರಭಾಸ ಹಾಗೂ ಮಹೇಶ ಬಾಬು ನಟಿಸಲಿದ್ದಾರೆ ಅಂತಾ ಹೇಳಲಾಗ್ತಿದೆ. ಪ್ರಭಾಸಗೆ ಈಗಾಗ್ಲೇ ಬಾಹುಬಲಿ ಅನ್ನೋ ಸಿನ್ಮಾ ಆಲ್ ಟೈಂ ರೆಕಾರ್ಡ್ ನೀಡಿದೆ. ಈ ಜೋಡಿ ಜೊತೆಗೆ ಪ್ರಿನ್ಸ್ ಮಹೇಶ ಬಾಬು ಜೊತೆಯಾಗಲಿದ್ದಾರೆ ಅನ್ನೋ ಮಾತುಗಳು ಭರ್ಜರಿಯಾಗಿ ಕೇಳಿ ಬರ್ತಿವೆ.

ಜನವರಿ 8, 2021ಕ್ಕೆ RRR ಸಿನಿಮಾ ರಿಲೀಸ್ ಗೆ ಆಗ್ಲೇ ಪ್ಲಾನ್ ಆಗಿದೆ. ಇದು ಮುಗಿಯುತ್ತಿದ್ದಂತೆ ರಾಜಮೌಳಿ ಮತ್ತೊಂದು ಐತಿಹಾಸಿಕ ಪ್ರಾಜೆಕ್ಟ್ ನಲ್ಲಿ ಮಹೇಶ ಬಾಬು ಹಾಗೂ ಪ್ರಭಾಸ ಆ್ಯಕ್ಟ್ ಮಾಡ್ತಾರೆ ಅನ್ನೋದು ಸುದ್ದಿ. ಆದ್ರೆ, ಈ ಬಗ್ಗೆ ಈ ಮೂವರಲ್ಲಿ ಯಾರೊಬ್ಬರೂ ಏನೋ ಹೇಳಿಲ್ಲ. ಇದಕ್ಕೆ ಕೆಲವರು ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಯಂಗ್ ರೆಬಲ್ ಹಾಗೂ ಪ್ರಿನ್ಸ್ ಕಾಂಬಿನೇಷನ್ ಬೇಡ ಅಂತಿದ್ದಾರೆ. ಇದೇನಾಗಲಿದೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!