ಪ್ರಜಾಸ್ತ್ರ ಲೈಫ್ ಸ್ಟೈಲ್
ಇದೀಗ ಎಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಜೋರಾಗಿದೆ. ಮಾರ್ಚ್ 18ರಂದು ಎಲ್ಲೆಡೆ ರಂಗಿನಾಟ ನಡೆಯುತ್ತೆ. ಆದರೆ, ಅಂದು ಕೆಲವರು ಬಣ್ಣವನ್ನು ಆಡುವುದಿಲ್ಲ. ಮುಖದ ಸೌಂದರ್ಯಕ್ಕೆ ಹಾಗೂ ತಲೆ ಕೂದಲಿಗೆ ಪೆಟ್ಟು ಬೀಳುತ್ತೆ ಎಂದು ದೂರು ಉಳಿದು ಬಿಡುತ್ತಾರೆ. ಅದರ ಬದಲು ಖುಷಿಯಿಂದ ಬಣ್ಣದಾಟವಾಡಿ ನಂತರ ಹೀಗೆ ಮಾಡಿದರೆ ನಿಮ್ಮ ಮುಖದ ಕಾಂತಿ ಹಾಳಾಗುವುದಿಲ್ಲ.
ಕಡಲೆಹಿಟ್ಟನ್ನು ಹಾಲಿನೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ ಮುಖ ತೊಳೆದುಕೊಳ್ಳಿರಿ. ಇನ್ನು ತೆಂಗಿನ ಎಣ್ಣೆಯಿಂದ ಮುಖ, ಮೈ, ಕೈಗೆಲ್ಲ ಮಸಾಜ್ ಮಾಡಿಕೊಂಡು ನಂತರ ಕಡಲೆಹಿಟ್ಟಿನಿಂದ ತೊಳೆದುಕೊಂಡರೆ ಬಣ್ಣ ಹೋಗುತ್ತೆ. ತಲೆ ಕೂದಲಿಗೆ ಹತ್ತಿದ ಬಣ್ಣ ಹೋಗಲು ಹೀಗಿ ಮಾಡಿ.
ಶಾಂಪೂನಿಂದ ತಲೆಯನ್ನು ತೊಳೆದುಕೊಳ್ಳುವ ಬದಲು, ಮೊದಲು ತಣ್ಣೀರಿನಿಂದ ಕೂದಲು ತೊಳೆದುಕೊಳ್ಳಿ. ನಂತರ ನೆನೆಸಿಟ್ಟಿ ಮೆಂತೆಯನ್ನು ಮೊಸರಿನಿಂದ ರುಬ್ಬಿಕೊಂಡು ಹೇರ್ ಪ್ಯಾಕ್ ಹಾಕಿಕೊಳ್ಳಿ. ಅರ್ಧಗಂಟೆ ನಂತರ ಶಾಂಪೂನಿಂದ ತಲೆ ತೊಳೆದುಕೊಳ್ಳಿ.
ಇನ್ನು ಡೀಪ್ ಕಂಡೀಷನಿಂಗ್ ಇದ್ದರೆ ಜೇನು ತುಪ್ಪ ಮತ್ತು ಆಲಿವ್ ಎಣ್ಣೆ ಮಿಕ್ಸ್ ಮಾಡಿ ಹಚ್ಚಿಕೊಳ್ಳಬಹುದು. ಅಥವ ಒಂದು ಕಪ್ ಮೊಸರಿನೊಂದಿಗೆ ಒಂದು ಸ್ಪೂನ್ ನಿಂಬೆ ರಸ ಮಿಕ್ಸ್ ಮಾಡಿ ಹಚ್ಚಿಕೊಂಡು ತಲೆ ತೊಳೆದುಕೊಳ್ಳಿ. ಇದರಿಂದ ಕೂದಲಿಗೆ ಅಂಟಿದ ಬಣ್ಣ ಹೋಗುತ್ತೆ. ಈ ರೀತಿಯಾಗಿ ನೀವು ಬಣ್ಣ ಆಡಿದ ನಂತರ ಮಾಡಿದರೆ ಸರಳವಾಗಿ ಬಣ್ಣದ ಕಲೆ ಹೋಗಿಸಬಹುದು.