ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕ್ಯಾಲಿಫೋರ್ನಿಯಾ: ಆಸ್ಕರ್ ಅವಾರ್ಡ್ 2022ರ ಕಾರ್ಯಕ್ರಮ ಇಲ್ಲಿನ ಲಾಸ್ ಏಂಜಲೀಸ್ ನಲ್ಲಿರುವ ಡಾಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿದೆ. ಕಿಂಗ್ ರಿಚರ್ಡ್ ಚಿತ್ರದಲ್ಲಿನ ನಟನೆಗಾಗಿ ನಟ ವಿಲ್ ಸ್ಮಿತ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.
ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ನಟ ವಿಲ್ ಸ್ಮಿತ್ ಭಾವುಕರಾಗಿ ಕಣ್ಣೀರು ಹಾಕಿದರು. ಈ ಸಾಧನೆಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು.
ಇನ್ನು ಜೆಸ್ಸಿಕಾ ಚಸ್ಟಿನಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಐಸ್ ಆಫ್ ಟಮ್ಮಿ ಫಯೆ ಅನ್ನೋ ಚಿತ್ರದಲ್ಲಿನ ನಟನೆಗಾಗಿ ಆಸ್ಕರ್ ಪ್ರಶಸ್ತಿ ಪಡೆದರು.