ವಲಸೆ ಸಮಸ್ಯೆಗೆ ದೂರದೃಷ್ಟಿ ಇಲ್ಲದಿರುವುದೆ ಕಾರಣ: ಪ್ರೊ.ಫ಼ರಹನಾಜ಼್

271

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಲಿಂಗಸಗೂರು: ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ವಲಸೆ ಹೋಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ಆತಂಕ ಮೂಡಿಸಿದೆ ಎಂದು ಪ್ರೊ.ಫರ್ಹಾನಾಜ್ ಹೇಳಿದರು.

ರಾಯಚೂರು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಲಿಂಗಸಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಡಿಸೆಂಬರ್ 10, 11ರಂದು 2 ದಿನಗಳ ಕಾಲ ನಡೆಯಿತು. ವಚನಗಾರ್ತಿ ಆಯ್ದಕ್ಕಿ ಲಕ್ಕಮ್ಮ ಹೆಸರನ್ನು ವೇದಿಕೆಗೆ ಇಡಲಾಗಿತ್ತು. ಈ ವೇಳೆ ‘ವಲಸೆ ಸಮಸ್ಯೆಗೆ ಕಾರಣ ಪರಿಹಾರ ಪರಿಣಾಮ ಕುರಿತು ಪ್ರೊ.ಫರ್ಹಾನಾಜ್ ಅವರು ಪ್ರಬಂಧ ಮಂಡಿಸಿ ಮಾತನಾಡಿದರು.

ಸರ್ಕಾರಗಳು ದೂರದೃಷ್ಟಿವುಳ್ಳ ಯೋಜನೆಗಳನ್ನು ಕಾರ್ಯಗತಗೊಳಿಸದಿರುವುದೆ ವಲಸೆಗೆ ಕಾರಣ. ಜಿಲ್ಲೆಯಲ್ಲಿ ಅವಕಾಶ ಮತ್ತು ಸಂಪನ್ಮೂಲ ಇದ್ದರು ಅವುಗಳ ಬಳಕೆ ಸರಿಯಾಗಿ ಆಗುತ್ತಿಲ್ಲ. ಅದರ ಹಿನ್ನೆಡೆಯಿಂದ ದುಡಿಯುವ ವರ್ಗದ ಜನರಿಗೆ ಜೀವನ ಭದ್ರತೆ ಸಿಗುತ್ತಿಲ್ಲ ಎಂದು ವಿಷಾದಿಸಿದರು. ಈ ವೇಳೆ ಕಸಾಪ ಜಿಲ್ಲಾಧ್ಯಕ್ಷರು, ತಾಲೂಕಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು, ಸಾಹಿತಿಗಳು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!