ಮೈಸೂರು: ಡಿ ಬಾಸ್ ಇಂದು ದಿಢೀರ್ ಎಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ರು. ಹೀಗಾಗಿ ಅವರ ಫ್ಯಾನ್ಸ್ ಸಾಕಷ್ಟು ಗಾಬರಿಯಾಗಿದ್ರು. ಆದ್ರೆ, ತಮ್ಗೆ ಯಾವುದೇ ಸಮಸ್ಯೆಯಿಲ್ಲ. ಯಾರೂ ಗಾಬರಿಯಾಗಬೇಡಿ. ಗ್ಯಾಸ್ಟ್ರಿಕ್ ಸಮಸ್ಯೆಯಾಗಿತ್ತು ಎಂದು ಹೇಳಿದ್ದಾರೆ.
ಇದೀಗ ಡಿಶಾರ್ಜ್ ಆಗಿರುವ ನಟ ದರ್ಶನ, ಮಾಧ್ಯಮದವರೊಂದಿಗೆ ಮಾತ್ನಾಡಿ, ನಾನು ಆರೋಗ್ಯವಾಗಿದ್ದೇನೆ. ಸ್ವಲ್ಪ ಗ್ಯಾಸ್ಟ್ರಿಕ್ ಸಮಸ್ಯೆ. ಟೈಂ ಇಲ್ಲದ ಟೈಂ ಕೆಲಸ ಅಲ್ವೆ ನಮ್ದು. ಹೀಗಾಗಿ ಸಮಸ್ಯೆಯಾಗಿದೆ. ಇವಾಗ ಫಸ್ಟ್ ಕ್ಲಾಸ್ ಎಂದಿದ್ದಾರೆ. ಈ ಮಾತುಗಳನ್ನ ಕೇಳಿದ ದರ್ಶನ ಫ್ಯಾನ್ಸ್ ಖುಷಿಯಾಗಿದ್ದಾರೆ.