ನಟಿ ಜಯಪ್ರದಾಗೆ ಬಂಧನ ಭೀತಿ

182

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಹುಭಾಷಾ ನಟಿ ಜಯಪ್ರದಾಗೆ ಇದೀಗ ಬಂಧನ ಭೀತಿ ಎದುರಾಗಿದೆ. ನಟಿಯ ಮಾಲೀಕತ್ವದ ಥಿಯೇಟರ್ ಸಿಬ್ಬಂದಿಯ ಇಎಸ್ಐ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಮ್ಯಾಜಿಸ್ಟ್ರೇಟ್ ಕೋರ್ಟ್ 6 ತಿಂಗಳ ಸದಾ ಶಿಕ್ಷೆ ವಿಧಿಸಿದೆ. ಶಿಕ್ಷೆ ರದ್ದಿಗೆ ಹೈಕೋರ್ಟ್ ಗೆ ಹೋಗಿದ್ದರು.

ಮದ್ರಾಸ್ ಹೈಕೋರ್ಟ್ ಕೆಳಹಂತದ ನ್ಯಾಯಾಲಾಯದ ತೀರ್ಪು ಎತ್ತಿ ಹಿಡಿದಿದೆ. 15 ದಿನಗಳೊಳಗೆ ಕೋರ್ಟ್ ಗೆ ಶರಣಾಗಿ 20 ಲಕ್ಷ ರೂಪಾಯಿ ಠೇವಣಿ ಇಟ್ಟರೆ ಜಾಮೀನು ನೀಡಬಹುದಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆಯಂತೆ.

ಏನಿದು ಪ್ರಕರಣ?

ನಟಿ ಜಯಪ್ರದಾ ಸೇರಿದಂತೆ ಮೂವರು ಮಾಲಿಕತ್ವದಲ್ಲಿ ಚೆನ್ನೈನಲ್ಲಿ ಜಯಪ್ರದಾ ಸಿನಿ ಥಿಯೇಟರ್ ಅನ್ನು 1985ರಲ್ಲಿ ಪ್ರಾರಂಭಿಸಿದ್ದರು. ಮುಂದೆ 2006ರ ಸಂದರ್ಭದಲ್ಲಿ ನಷ್ಟದ ಕಾರಣಕ್ಕೆ ಮುಚ್ಚಲಾಯಿತು. ಆಗ ನೌಕರರ 37,68,977 ರೂಪಾಯಿ ಇಎಸ್ಐ ಬಾಕಿ ಉಳಿಸಿಕೊಂಡಿದ್ದು, ಜೊತೆಗೆ 2008ರಲ್ಲಿ 20 ಲಕ್ಷ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕುರಿತು ವರದಿಯಾಗಿದೆ.

ಚಿತ್ರಂಗದ ಜೊತೆಗೆ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿಯ ನಾಯಕಿಯಾಗಿರುವ ಜಯಪ್ರದಾ, 1996-2002ರ ತನಕ ರಾಜ್ಯಸಭಾ ಸದಸ್ಯರಾಗಿದ್ದರು. 2004-20214ರತನಕ ಲೋಕಸಭಾ ಸದಸ್ಯರಾಗಿದ್ದರು.




Leave a Reply

Your email address will not be published. Required fields are marked *

error: Content is protected !!