‘ಆನಂದ’ ಪರೀಕ್ಷೆ: ಸಿಂದಗಿಯ ಜಿ.ಪಿ ಪೋರವಾಲ ಕಾಲೇಜ್ ವಿದ್ಯಾರ್ಥಿ ಪ್ರಥಮ

503

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಚಿತ್ರದುರ್ಗದ ಬಸವಕೇಂದ್ರ ಶ್ರೀಮುರುಘಾಮಠವು 2019-20ನೇ ಸಾಲಿನಲ್ಲಿ, ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ‘ಆನಂದ’ ಪರೀಕ್ಷೆ ಆಯೋಜಿಸಿತ್ತು. ಇದರಲ್ಲಿ ಪಟ್ಟಣದ ಜಿ.ಪಿ ಪೋರವಾಲ ಕಲಾ, ವಾಣಿಜ್ಯ ಹಾಗೂ ವಿವಿ ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದ ವಿದ್ಯರ್ಥಿ ಪ್ರಥಮ ಸ್ಥಾನ ಪಡೆದಿದ್ದಾನೆ.

ಮಹಾವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿ ಪ್ರಶಾಂತ ಸೋರೆಗಾಂವಕರ ಪ್ರಥಮ ಸ್ಥಾನ ಪಡೆದಿದ್ದಾನೆ. ಇತ್ತೀಚಿಗೆ ಶರಣಸಂಸ್ಕೃತಿ ಉತ್ಸವದಲ್ಲಿ ವಿದ್ಯಾರ್ಥಿಯನ್ನ ಸನ್ಮಾಸಿಲಾಗಿದೆ. ಅಲ್ದೇ, ಶಿಕ್ಷಕಿ ಶ್ರೀ ಪ್ರಶಸ್ತಿಯನ್ನ ಇದೆ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಪಿ.ಎಸ್ ಚೌಕೀಮಠ ಅವರು ಪಡೆದಿದ್ದಾರೆ.

ವಿದ್ಯಾರ್ಥಿ ಪ್ರಶಾಂತ ಸೋರೆಗಾಂವಕರ ಹಾಗೂ ಸಹ ಪ್ರಾಧ್ಯಾಪಕಿ ಡಾ.ಪಿ.ಎಸ್ ಚೌಕೀಮಠ ಅವರನ್ನ ಮಹಾವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ವತಿಯಿಂದ ಅಭಿನಂದಿಸಲಾಗಿದೆ. ಈ ವೇಳೆ ಪ್ರಾಚಾರ್ಯರಾದ ಪ್ರೊ ಆರ್.ಎಸ್ ಭೂಶೆಟ್ಟಿ, ಐಕ್ಯೂಎಸಿ ಕೋಆರ್ಡಿನೇಟರ್ ಪ್ರೊ ಎಮ್.ಎಚ್ ಲೋಣಿ, ಪ್ರೊ ಡಿ.ಎಂ ಪಾಟೀಲ, ಡಾ.ಎಸ್.ಐ ಭಂಡಾರಿ ಮತ್ತು ಪ್ರೊ ಪ್ರತೀಕಾ ಸೇರಿದಂತೆ ಅನೇಕರು ಹಾಜರಿದ್ರು.




Leave a Reply

Your email address will not be published. Required fields are marked *

error: Content is protected !!