‘ಭೈರತಿ ರಣಗಲ್’ ರೀ ಎಂಟ್ರಿ..

174

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕಳೆದ ಐದು ವರ್ಷಗಳ ಹಿಂದೆ ಮಫ್ತಿ ಅನ್ನೋ ಸಿನಿಮಾ ರಿಲೀಸ್ ಆಗಿತ್ತು. ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಆರ್ಭಟಕ್ಕೆ ಕನ್ನಡ ಸಿನಿ ದುನಿಯಾ ಶೇಕ್ ಆಗಿತ್ತು. ಭೈರತಿ ರಣಗಲ್ ಆಗಿದ್ದ ಶಿವಣ್ಣನ ಹೊಸ ಗೆಟಪ್ ಧೂಳೆಬ್ಬಿಸಿತ್ತು. ಆ ಭೈರತಿ ರಣಗಲ್ ರೀ ಎಂಟ್ರಿ ಕೊಡುತ್ತಿದ್ದಾರೆ.

ಯೆಸ್, ನಿರ್ದೇಶಕ ನರ್ತನ್ ಮಫ್ತಿ ಚಿತ್ರದ ಮೂಲಕ ಹೊಸ ಅಲೆ ಸೃಷ್ಟಿಸಿದ್ದರು. ಅದೆ ಜೋಡಿ ಐದು ವರ್ಷಗಳ ಮೂಲಕ ಮತ್ತೆ ಘರ್ಜಿಸಲು ಬರುತ್ತಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ‘ಭೈರತಿ ರಣಗಲ್’ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಕುರ್ಚಿ ಮೇಲೆ ಕುಳಿತಿರುವ ಖಡಕ್ ಲುಕ್ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ.

ಗೀತಾ ಶಿವರಾಜ್ ಕುಮಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪೊಲೀಸ್ ಅಧಿಕಾರಿ ಶ್ರೀಮುರುಳಿ, ಗಣ ಆಗಿ ರಗಣಗಲ್ ಸಾಮ್ರಾಜ್ಯಕ್ಕೆ ಮಫ್ತಿಯಲ್ಲಿ ಎಂಟ್ರಿಕೊಟ್ಟಿದ್ದ. ಅಲ್ಲಿಂದ ಏನೆಲ್ಲ ಆಯ್ತು ಅನ್ನೋದು ಸಿನಿಮಾ ನೋಡಿದವರಿಗೆಲ್ಲ ಗೊತ್ತು. ಈಗ ಹೇಳಕ್ಕೆ ಹೊರಟಿರುವುದು ಗಣ, ರಣಗಲ್ ಕೋಟೆಗೆ ಬರುವುದಕ್ಕೂ ಮೊದಲು ಏನೆಲ್ಲಾ ಆಗಿತ್ತು ಅನ್ನೋ ಕಥೆ ಹೇಳಲು ನಿರ್ದೇಶಕ ನರ್ತನ್ ರೆಡಿಯಾಗಿದ್ದು, ಅಭಿಮಾನಿಗಳಿಗೆ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!