ಸೌಂಡ್ ಮಾಡ್ತಿದೆ ಬಿಲ್ಗೇಟ್ಸ್ ಟೀಸರ್

314

ನಟ ಶಿಶಿರ ಶಾಸ್ತ್ರಿ ಹಾಗೂ ಕಾಮಿಡಿ ಆ್ಯಕ್ಟರ್ ಚಿಕ್ಕಣ್ಣ ಅಭಿನಯದ ಬಿಲ್ಗೇಟ್ಸ್ ಚಿತ್ರದ ಟೀಸರ್ ಸಾಕಷ್ಟು ಸೌಂಡ್ ಮಾಡ್ತಿದೆ. ಪಕ್ಕಾ ಕಾಮಿಡಿ ಜಾನರ್ ಮೂವಿಯಾಗಿರುವ ಚಿತ್ರದಲ್ಲಿ ಒಂದೊಳ್ಳೆ ಸಂದೇಶವಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಶ್ರೀನಿವಾಸ ನಿರ್ದೇಶನ ಮಾಡಿರುವ ಚಿತ್ರದಲ್ಲಿ ಭರಪೂರ ಕಾಮಿಡಿಯಿದೆ. ಹಾಸ್ಯಪ್ರಿಯರಿಗೆ ಈ ಚಿತ್ರ ಖಂಡಿತ ಇಷ್ಟವಾಗುತ್ತೆ ಅಂತಾರೆ ನಿರ್ದೇಶಕರು. ಕುರಿ ಪ್ರತಾಪ, ಬ್ಯಾಂಕ್ ಜನಾರ್ಧನ, ವಿ.ಮನೋಹರ ಅವರ ಕಾಮಿಡಿ ಮೋಡಿ ಮಾಡಲಿದೆ. ರಶ್ಮಿತಾ ರೋಜಾ ಹಾಗೂ ಅಕ್ಷರಾ ರೆಡ್ಡಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಕೆಜಿಎಫ್ ಖ್ಯಾತಿಯ ಶಿವಕುಮಾರ ಕಲಾ ನಿರ್ದೇಶಕರಾಗಿದ್ದಾರೆ. ನೊಬಿನ್ ಪೌಲ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಹಾಸ್ಯದೊಂದಿಗೆ ಹೊಸ ಕಥೆಯೊಂದು ಹೇಳಲು ಬಿಲ್ಗೇಟ್ಸ್ ಟೀಂ ರೆಡಿಯಾಗಿದ್ದ ಫೆಬ್ರವರಿ 7ಕ್ಕೆ ಪ್ರೇಕ್ಷರ ಮುಂದೆ ಬರಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!