ಏಕಾಂತ ಸ್ಥಳಕ್ಕೆ ಹೋಗುವ ಜೋಡಿಗಳೇ ಹುಷಾರ್

150

ಪ್ರಜಾಸ್ತ್ರ ಸುದ್ದಿ

ತುಮಕೂರು: ಏಕಾಂತ ಸ್ಥಳದಲ್ಲಿ ಒಂದಿಷ್ಟು ಕಾಲ ಕಳೆಯಲು ಪ್ರೇಮಿಗಳು, ಹೊಸದಾಗಿ ಮದುವೆಯಾದವರು ಇಷ್ಟ ಪಡುತ್ತಾರೆ. ಹೀಗಾಗಿ ತಮ್ಮ ಸುತ್ತಲಿನ ಅಂತಹ ಸ್ಥಳಗಳನ್ನು ಹುಡುಕುತ್ತಾರೆ. ಆದರೆ, ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ನೀಚ ಕೆಲಸಕ್ಕೆ ಇಳಿಯುತ್ತಿದ್ದಾರೆ.

ಕುಣಿಗಲ್ ತಾಲೂಕಿನ ಹೊಸದುರ್ಗ ಬೆಟ್ಟದಲ್ಲಿ ಚಾರಣಕ್ಕೆ ಬಂದ ಜೋಡಿಗಳನ್ನು ಟಾರ್ಗೆಟ್ ಮಾಡಿಕೊಂಡು ಹಣ ಸೂಲಿಗೆ ಮಾಡುವುದು, ಬೆದರಿಕೆ ಹಾಕುವುದು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬಿಸಿಲು ಬಸವಣ್ಣ ದೇವಾಲಯದ ಹತ್ತಿರ ಜೋಡಿಯೊಂದನ್ನು ಹೆದರಿಸಿ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮಾಡಿದ್ದಾರೆ.

ಮೊಬೈಲ್ ಕಸೆದುಕೊಂಡು 30 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಬೆದರಿಕೆ ಹಾಕಿದ್ದಾರೆ. ಈ ವಿಷಯ ತಿಳಿದು ಸ್ಥಳೀಯರು ಬರುತ್ತಿದ್ದಂತೆ ಕಿರಾತಕರು ಪರಾರಿಯಾಗಿದ್ದಾರೆ. ಕುಣಿಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಬೈಕ್ ಪತ್ತೆಯಾಗಿದೆ. ಕಿಡಿಗೇಡಿಗಳ ಬಂಧನಕ್ಕೆ ಮುಂದಾಗಿದ್ದಾರೆ.

ಸಮಾಜದಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಯುವ ಜೋಡಿಗಳು ಏಕಾಂತ ಎಂದು ಬೆಟ್ಟ, ಕಾಡು, ಪಾರ್ಕ್ ಅಂತೆಲ್ಲ ಹೋಗುವ ಮುನ್ನ ತುಂಬಾ ಹುಷಾರ್ ಆಗಿರಬೇಕು. ಹೊಸ ಪ್ರದೇಶಕ್ಕೆ ಹೋಗುವುದಾದರೆ ಅದರ ಬಗ್ಗೆ ತಿಳಿದುಕೊಂಡು ಹೋಗುವುದು ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!