ನನ್ನ ಚಿತ್ರ ಬಹಿಷ್ಕರಿಸಬೇಡಿಯೆಂದ ಆಮೀರ್

376

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಆಗಸ್ಟ್ 11ರಂದು ವಿಶ್ವದಾದ್ಯಂತ ಆಮೀರ್ ಖಾನ್ ಹಾಗೂ ಕರೀನಾ ನಟನೆಯ ಲಾಲ್ ಸಿಂಗ್ ಚೆಡ್ಡಾ ಚಿತ್ರ ಬಿಡುಗಡೆಯಾಗುತ್ತಿದೆ. ಆದರೆ, ಈ ಚಿತ್ರವನ್ನು ಬಹಿಷ್ಕರಿಸಬೇಕು ಅನ್ನೋ ಟ್ರೆಂಡ್ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನಟ ಆಮೀರ್ ಖಾನ್, ನನ್ನ ಚಿತ್ರ ಬಹಿಷ್ಕರಿಸಬೇಡಿ. ಚಿತ್ರ ಪ್ರೇಮಿಗಳು ಸಿನಿಮಾ ನೋಡಿ ಎಂದಿದ್ದಾರೆ.

2015ರಲ್ಲಿ ನೀಡಿದ್ದ ಸಂದರ್ಶನದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಸಹ ನಡೆದಿದ್ದವು. ನಾಲ್ಕು ವರ್ಷಗಳ ಬಳಿಕ ಆಮೀರ್ ಖಾನ್ ಸಿನಿಮಾ ರಿಲೀಸ್ ಆಗುತ್ತಿದೆ. ಈ ಹೊತ್ತಿನಲ್ಲಿ ಮತ್ತೆ ಅವರಿಗೆ ಆತಂಕ ಶುರುವಾಗಿದೆ. ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ನಟನೆಯ ಜೊತೆಗೆ ಸಹ ನಿರ್ಮಾಪಕ ಸಹ ಆಗಿದ್ದಾರೆ. ಈ ಸಿನಿಮಾ ಹಾಲಿವುಡ್ ಆಸ್ಕರ್ ಪ್ರಶಸ್ತಿ ವಿಜೇತ ಫಾರೆಸ್ಟ್ ಗಂಪ್ ರಿಮೇಕ್ ಆಗಿದೆ.




Leave a Reply

Your email address will not be published. Required fields are marked *

error: Content is protected !!