ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-2

428

ಚಂದ್ರನ ಸಮೀಪಕ್ಕೆ ಚಂದ್ರಯಾನ-2 ನೌಕೆಯು ಇಂದು ಸೇರಿದೆ. ನೌಕೆಯನ್ನ ಭೂಮಿಯಿಂದ ಕಕ್ಷೆಗೆ ಏರಿಸುವ ಕೆಲಸ ಇಂದು ಯಶಸ್ವಿಯಾಗಿ ನಡೆಯಿತು. ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಚಂದ್ರಯಾನ ಯೋಜನೆಯ ಮತ್ತೊಂದು ಮಹತ್ವದ ಸಾಧನೆಯಾಗಿದೆ.

ಇಷ್ಟು ಮಾತ್ರಕ್ಕೆ ಕಕ್ಷೆಯ ಬದಲಾವಣೆ ಕಾರ್ಯ ಮುಗಿದಂತೆ ಅಲ್ಲ. ಇನ್ನು ನಾಲ್ಕು ಹಂತಗಳಲ್ಲಿ ಕಾರ್ಯಾಚರಣೆ ನಡೆಸಬೇಕಿದೆ. ಅಂತಿಮವಾಗಿ ಚಂದ್ರನ ಧ್ರುವ ಪ್ರದೇಶಕ್ಕೆ ಸುಮಾರು 100 ಕಿಲೋ ಮೀಟರ್ ಹತ್ತಿರದ ಕಕ್ಷೆಗೆ ನೌಕೆ ತಲುಪಲಿದೆ ಎಂದು ಇಸ್ರೋ ತಿಳಿಸಿದೆ. ಹೀಗಾಗಿ ಇದೊಂದು ಚಾಲೆಂಜ್ ಕೆಲಸ ಎಂದು ಇಸ್ಟ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.

ಚಂದ್ರಯಾನ-2 ನೌಕೆಯನ್ನ ಜುಲೈ 22ರಂದು ಉಡಾವಣೆ ಮಾಡಲಾಗಿದೆ. ನೌಕೆಯ ನಿಗದಿಯಂತೆ ಸಂಚರಿಸ್ತಿದೆ ಅಂತಾ ಹೇಳಲಾಗಿದೆ. ಇದರ ಬಗ್ಗೆ ಬೆಂಗಳೂರಿನಲ್ಲಿರುವ ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ ನಿರಂತರ ನಿಗಾ ಇಟ್ಟಿದೆ. ಇಂಡಿಯನ್ ಡೀಪ್ ಸ್ಪೇಸ್ ನೆಟ್ ವರ್ಕ್ ಇದಕ್ಕೆ ಸಾಥ್ ನೀಡಿದೆ.

ಇದುವರೆಗೂ ಯಾರು ಮಾಡಿರದ ದಕ್ಷಿಣ ಧ್ರುವದ ಬಗ್ಗೆ ಸಂಶೋಧನೆ ನಡೆಸ್ತಿದೆ. ಚಂದ್ರನ ಮೇಲೆ ನೀರು ಇರುವುದು ಚಂದ್ರಯಾನ-1ರಿಂದ ತಿಳಿದಿತ್ತು. ಚಂದ್ರಯಾನ-2 ಅದರ ಮುಂದಿನ ಅಧ್ಯಯನಕ್ಕೆ ಸಹಕಾರಿಯಾಗ್ತಿದೆ.




Leave a Reply

Your email address will not be published. Required fields are marked *

error: Content is protected !!