ಕಾಂಗ್ರೆಸ್ ಭ್ರಷ್ಟ ಪಕ್ಷ ಜಾಹೀರಾತು, ಬಿಜೆಪಿಗೆ ಚು.ಆ ನೋಟಿಸ್

98

ಪ್ರಜಾಸ್ತ್ರ ಸುದ್ದಿ

ನವದೆಹಲಿ: ವಿಶ್ವದ ಅತಿ ಭ್ರಷ್ಟ ಪಕ್ಷ ಕಾಂಗ್ರೆಸ್ ಎಂದು ಜಾಹೀರಾತು ನೀಡಿದ್ದ ಬಿಜೆಪಿಗೆ ಚುನಾವಣೆ ಆಯೋಗ ನೋಟಿಸ್ ನೀಡಿದೆ. ಮೇ 9ರ ರಾತ್ರಿ 8ಗಂಟೆಯೊಳಗೆ ಇದಕ್ಕೆ ಸಂಬಂಧಿಸಿದಂತೆ ದಾಖಲೆ ನೀಡಬೇಕು ಹಾಗೂ ಸಾರ್ವಜನಿಕಗೊಳಿಸಬೇಕು ಎಂದಿದೆ.

ಒಂದು ವೇಳೆ ಸಾಕ್ಷಾಧಾರಗಳನ್ನು ನೋಡದೆ ಹೋದರೆ ಮಾದರಿ ನೀತಿ ಸಂಹಿತೆ ಹಾಗೂ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಯಾಕೆ ಕ್ರಮ ತೆಗೆದುಕೊಳ್ಳಬಾರದು ಎಂದು ಬಿಜೆಪಿಗೆ ನೋಟಿಸ್ ನೀಡಿದೆ.

ಬಿಜೆಪಿ ನೀಡಿದ್ದ ಜಾಹೀರಾತು ಸಂಬಂಧ ಕಾಂಗ್ರೆಸ್ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿತ್ತು. ಎದುರಾಳಿ ಪಕ್ಷದ ವಿರುದ್ಧ ಟೀಕಿಸುವ ಸಂದರ್ಭದಲ್ಲಿ ಸಂವಿಧಾನಬದ್ಧ ವಿಚಾರಗಳ ಕಡೆ ಗಮನ ಹರಿಸಬೇಕು. ಮಾದರಿ ನೀತಿ ಸಂಹೀತೆಗೆ ಬದ್ಧವಾಗಿರಬೇಕು ಎಂದು ಸೂಚಿಸಿದೆ.




Leave a Reply

Your email address will not be published. Required fields are marked *

error: Content is protected !!