ಮಧ್ಯಾಹ್ನದ ಹೆಲ್ತ್ ಬುಲೆಟಿನ್: ರಾಜ್ಯಲ್ಲಿಂದು ಮತಷ್ಟು ಕರೋನಾ ಕೇಸ್

396

ಬೆಂಗಳೂರು: ಕೋವಿಡ್ 19 ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಇದರ ಪ್ರಕಾರ ರಾಜ್ಯದಲ್ಲಿಯೂ ಇಂದು ಮತ್ತಷ್ಟು ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಇದುವರೆಗೂ ಬಂದಿರುವ ಮಾಹಿತಿ ಪ್ರಕಾರ 15 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ನಿನ್ನೆ 17 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಇಂದು ಮಧ್ಯಾಹ್ನದಷ್ಟಿಗೆ 15 ಆಗಿದೆ. ಹೀಗಾಗಿ ಸೋಂಕಿನ ಸಂಖ್ಯೆ 247ಕ್ಕೆ ಏರಿಕೆಯಾಗಿದೆ. ಇಂದು ಎಲ್ಲೆಲ್ಲೆ ಎಷ್ಟೆಷ್ಟು ಸೋಂಕು ಪಾಸಿಟಿವ್ ಬಂದಿವೆ ಅನ್ನೋದರ ಲಿಸ್ಟ್ ಇಲ್ಲಿದೆ.

ಧಾರವಾಡದಲ್ಲಿ 4, ಮಂಡ್ಯ 3, ಬೆಳಗಾವಿ 3, ಬೀದರ 2, ಬಾಗಲಕೋಟೆ 1, ಬೆಂಗಳೂರು ನಗರ 1 ಹಾಗೂ ಗ್ರಾಮಾಂತರದಲ್ಲಿ 1 ಸೋಂಕು ಕಾಣಿಸಿಕೊಂಡಿದೆ. ಹೀಗೆ ಒಟ್ಟು 15 ಜನರಲ್ಲಿ ಕರೋನಾ ಪಾಸಿಟಿವ್ ಬಂದಿದ್ದು, ಇದುವರೆಗೂ 59 ಜನ ಗುಣಮುಖರಾಗಿದ್ದಾರೆ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!