ಸಿಂದಗಿ ತಾಲೂಕಿನಾದ್ಯಂತ ಸಹಾಯದ ಹೊಳೆ ಹರಿಸ್ತಿರುವ ಜಿ.ಆರ್ ಗ್ರೂಪ್

544
ಶಿವಾನಂದ ಪಾಟೀಲ ಸೋಮಜಾಳ

ಸಿಂದಗಿ: ಕೋವಿಡ್ 19 ಯಾವ ಪ್ರಮಾಣದಲ್ಲಿ ಜನರ ಜೀವ ಹಾಗೂ ಜೀವನದ ಜೊತೆ ತನ್ನಾಟವಾಡ್ತಿದೆ ಅನ್ನೋದು ಇಡೀ ವಿಶ್ವಕ್ಕೆ ಗೊತ್ತಾಗಿದೆ. ಹೀಗಾಗಿಯೇ ಇಂದು ದಿನದ ದುಡಿಮೆ ನಂಬಿ ಬದುಕುತ್ತಿದ್ದವರ ಬದುಕು ಬೀದಿಗೆ ಬಂದಿದೆ. ಇಂಥವರಿಗೆ ನೆರವಿನ ಹಸ್ತ ಚಾಚುವ ಅದೆಷ್ಟೋ ಮನಸ್ಸುಗಳು ನಿರಂತರವಾಗಿ ತಮ್ಮ ಕಾರ್ಯವನ್ನ ಮಾಡಿಕೊಂಡು ಬರುತ್ತಿವೆ. ಅದರಲ್ಲಿ ಜಿ.ಆರ್ ಗ್ರೂಪ್ ಧಾರವಾಡ, ಇದರ ಮುಖ್ಯಸ್ಥರಾಗಿರುವ ಶಿವಾನಂದ ಪಾಟೀಲ ಸೋಮಜಾಳ ಸಹ ಒಬ್ಬರು.

ಇವರು ಕೇವಲ ಒಂದು ದಿನದ ನೆಪದ ಸಹಾಯ ಮಾಡ್ಲಿಲ್ಲ. ಲಾಕ್ ಡೌನ್ ಘೋಷಣೆಯಾದ ದಿನದಿಂದ ನಿರಂತರವಾಗಿ ಸೇವೆ ಸಲ್ಲಿಸ್ತಿದ್ದಾರೆ. ಶಿವಾನಂದ ಪಾಟೀಲ ಸೋಮಜಾಳ ಅವರ ಗೈರು ಹಾಜರಿಯಲ್ಲಿ ಹಾಗೂ ಅವರ ಮಾರ್ಗದರ್ಶನದಲ್ಲಿ ಸಿಂದಗಿ, ಆಲಮೇಲ ತಾಲೂಕಿನಾದ್ಯಂತ ಇವರ ಬೆಂಬಲಿಗರು, ಸ್ನೇಹಿತರು, ಅಭಿಮಾನಿಗಳು ದುಡಿಯುತ್ತಿದ್ದಾರೆ.

ಭಾನುವಾರ ತಾಲೂಕಿನ ಗುತ್ತರಗಿ, ಗೋಲಗೇರಿ, ಮನ್ನಾಪುರ, ಡಂಬಳ, ಯರಗಲ್ ಬಿಕೆ, ಬಂಟನೂರ, ಗಬಸವಳಗಿ ಸೇರಿದಂತತೆ ನಾಂದೇಡ್ ಮಹಾರಾಷ್ಟ್ರ ಕೂಲಿ ಕಾರ್ಮಿಕರು ಜನರಿಗೆ ಸುಮಾರು 2 ಲಕ್ಷದ 64000 ರೂಪಾಯಿ ಮೌಲ್ಯದ 1 ಸಾವಿರದ 210 ಹತ್ತು ರೂಪಾಯಿಯ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಗಿದೆ. ಈ ಭಾಗದ ಯಾವ ಜನಪ್ರತಿನಿಧಿಗಳು ಮಾಡದ ಕೆಲಸವನ್ನ ಜಿ.ಆರ್ ಗ್ರೂಪ್ ಮಾಡುತ್ತಿದೆ.

ಮೊದಲಿನಿಂದಲೂ ಸಾಮಾಜಿಕ ಕಾರ್ಯಗಳನ್ನ ಮಾಡಿಕೊಂಡು ಬರಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿಯೂ ಮುಂದುವರೆಯುತ್ತೆ. ಈ ಸಮಯದಲ್ಲಿ ನಾನು ಇರಬೇಕಿತ್ತು. ಆದರೆ, ಲಾಕ್ ಡೌನ್ ನಿಯಮ ಉಲ್ಲಂಘಿಸಬಾರದು. ನಾವೆಲ್ಲರೂ ಕಾನೂನು ಪಾಲಕರು. ಅದರಂತೆ ನಡೆದಾಗ ಎಲ್ಲರಿಗೂ ಒಳ್ಳೆಯದು. ಹೀಗಾಗಿ ನಾನು ಧಾರವಾಡದಲ್ಲಿಯೇ ಉಳಿಯಬೇಕಾಗಿದೆ. ಲಾಕ್ ಡೌನ್ ಮುಗಿದ ಮೇಲೆ ಬಂದು ಈ ಕಾರ್ಯದಲ್ಲಿ ಭಾಗವಹಿಸುತ್ತೇನೆ.

ಶಿವಾನಂದ ಪಾಟೀಲ ಸೋಮಜಾಳ, ಜಿ.ಆರ್ ಗ್ರೂಪ್ ಮುಖ್ಯಸ್ಥರು

ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗೂ ಹೋಗಿ ಬಡವರಿಗೆ, ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ ಧವಸ ದಾನ್ಯಗಳನ್ನ, ಹಣ್ಣು ತರಕಾರಿಗಳನ್ನ, ಮಾಸ್ಕ್ ಗಳನ್ನ, ಕರೋನಾ ವಾರಿಯರ್ಸ್ ಗೆ ಊಟದ ವ್ಯವಸ್ಥೆಯನ್ನ ಹೀಗೆ ಹತ್ತು ಹಲವು ಕೆಲಸಗಳನ್ನ ಮಾಡಿಕೊಂಡು ಬರ್ತಿದ್ದಾರೆ. ಈ ರೀತಿಯ ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗಬೇಕು ಅನ್ನೋದು ಶಿವಾನಂದ ಪಾಟೀಲ ಸೋಮಜಾಳ ಅವರ ಆಸೆ. ಆದ್ರೆ, ಲಾಕ್ ಡೌನ್ ಕಾನೂನು ಎಲ್ಲರಿಗೂ ಒಂದೇ ಅದನ್ನ ನಾವು ಮೀರಬಾರದು. ಹೀಗಾಗಿ ನಾನು ಧಾರವಾಡದಲ್ಲಿಯೇ ಇದ್ದು, ಎಲ್ಲವನ್ನ ನಿರ್ದೇಶನ ಮಾಡ್ತಿದ್ದೇನೆ ಎಂದು ‘ಪ್ರಜಾಸ್ತ್ರ’ಕ್ಕೆ ತಿಳಿಸಿದ್ದಾರೆ.

ಜಿ.ಆರ್ ಗ್ರೂಪ್ ಧಾರವಾಡ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಕಾರ್ಯದಲ್ಲಿ ಮಹಾಂತೇಶ ಪರಗೊಂಡ, ಶಂಕರಗೌಡ, ಅಜಿತ ಭೀಮರಾಯ ಬಿರಾದಾರ,  ಭೀಮನಗೌಡ ಬಿರದಾರ, ಸಂತೋಷ ಜೋಗುರ, ರಮೇಶ ಹೆಬ್ಯಾಳ, ಅಯ್ಯನಗೌಡ ಬಿರಾದಾರ, ಪರಮಾನಂದ ಬಗಲಿ, ಶಂಕರಗೌಡ ಹಚ್ಚಡದ, ರಾಮನಗೌಡ ಬನ್ನೆಟ್ಟಿ, ಎಂ.ಎಸ್.ಬಿರಾದಾರ ಅನೇಕರು ಭಾಗವಹಿಸಿ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗೂ ಸೇವೆ ಸಲ್ಲಿಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!