ಅಪಹರಣದ ನಾಟಕವಾಡಿ ಮದುವೆಯಾದ ಯುವತಿ

230

ಪ್ರಜಾಸ್ತ್ರ ಸುದ್ದಿ

ತೆಲಂಗಾಣ: ಪ್ರೀತಿಸಿದ ಯುವಕನನ್ನು ಮದುವೆಯಾಗುವ ಉದ್ದೇಶದಿಂದ ತಂದೆಯ ಎದುರೆ ಯುವತಿಯೊಬ್ಬಳು ಅಪಹರಣದ ನಾಟಕ ಆಡಿರುವ ಘಟನೆ ನಡೆದಿದೆ. ತೆಲಂಗಾಣದ ರಾಜಣ್ಣ ಸಿರ್ಸಿ ಎಂಬಲ್ಲಿ ನಸುಕಿನ ಜಾವ 5.30ರ ಸಮಯದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿದೆ. 18 ವರ್ಷದ ಶಾಲಿನಿ ಅನ್ನೋ ಯುವತಿಯ ಅಪಹರಣದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈಗ ಯುವತಿ ಈ ಬಗ್ಗೆ ಮಾತನಾಡಿದ್ದಾಳೆ.

ಶಾಲಿನಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ಹಿಂದೆಯೇ ಮದುವೆಯಾಗಿದ್ದಳಂತೆ. 18 ವರ್ಷ ತುಂಬದ ಪರಿಣಾಮ ಮನೆಯಲ್ಲಿ ಹೇಳಲು ಆಗದೆ ಮುಚ್ಚಿಟ್ಟದ್ದಳಂತೆ. ಹೀಗಾಗಿ ಸ್ನೇಹಿತರ ಸಹಾಯದೊಂದಿಗೆ ಅಪಹರಣದ ನಾಟಕ ಆಡಿದ್ದೇನೆ ಹೇಳಿದ್ದಾಳೆ.

ಅಪಹರಣದ ನಾಟಕಕ್ಕೆ ಸಾಥ್ ನೀಡಿದವರಲ್ಲಿ ಓರ್ವ ಯುವತಿ ಊರಿನವನು, ಉಳಿದ ಮೂವರು ಹಳೆಯ ಸ್ನೇಹಿತರು ಇದ್ದಾರೆ ಎಂದು ಇನ್ಸ್ ಪೆಕ್ಟರ್ ಕಿರಣ್ ಕುಮಾರ್ ಹೇಳಿದ್ದಾರೆ. 10 ದಿನಗಳ ಹಿಂದೆ ನಿಶ್ಚಿತಾರ್ಥ ದಿನ 24 ವರ್ಷದ ದಂತವೈದ್ಯೆಯನ್ನು ಮಾಜಿ ಪ್ರಿಯಕರ 30-40 ಜನರೊಂದಿಗೆ ಮನೆಗೆ ನುಗ್ಗಿ ಅಪಹರಣ ಮಾಡಿದ್ದ. ನಂತರ ಯವತಿ ಮನೆಗೆ ವಾಪಸ್ ಆಗಿದ್ದಳು.




Leave a Reply

Your email address will not be published. Required fields are marked *

error: Content is protected !!