7 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಇಸ್ರೊ

254

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಭಾನುವಾರ ಮುಂಜಾನೆ 6.30ರ ಸಮಯದಲ್ಲಿ 7 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ. 360 ಕೆಜಿ ತೂಕದ ಡಿಎಸ್, ಎಸ್ಎಆರ್ ಹಾಗೂ 6 ಉಪಗ್ರಹಗಳು ಸಿಂಗಾಪುರಕ್ಕೆ ಸೇರಿದ್ದು, ಸತೀಶ್ ಧವನ್ ಕೇಂದ್ರದಿಂದ ಉಡ್ಡಯನ ನಡೆಸಲಾಯಿತು.

ಈ ಉಪಗ್ರಹಗಳನ್ನು ಸಿಂಗಾಪುರ ಸರ್ಕಾರದ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಹಾಗೂ ಎಸ್ ಟಿ ಇಂಜಿನಿಯರ್ ನಡುವಿನ ಒಳಗೊಳ್ಳುವಿಕೆಯ ಭಾಗವಾಗಿ ಇಂದು ಉಡ್ಡಯನ ನಡೆಸಲಾಗಿದೆ. ನಿಖರವಾಗಿ ಉದ್ದೇಶಿತ ಕಕ್ಷೆಗೆ ಉಪಗ್ರಹಗಳು ಸೇರಿಸುವಲ್ಲಿ ಇಸ್ರೊ ಯಶಸ್ವಿಯಾಗಿದೆ.




Leave a Reply

Your email address will not be published. Required fields are marked *

error: Content is protected !!