ಕೆಎಸ್ಆರ್ ಟಿಸಿ ಬಸ್ ಟಿಕೆಟ್ ಮೇಲೆ ಜೈ ಮಹಾರಾಷ್ಟ್ರ ಬರಹ

269

ಪ್ರಜಾಸ್ತ್ರ ಸುದ್ದಿ

ಗದಗ: ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಟಿಕೆಟ್ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದ ಬರಹ ವೈರಲ್ ಆಗಿದೆ. ಮರಾಠಿ ಭಾಷೆಯಲ್ಲಿ ಟಿಕೆಟ್ ಮುದ್ರಣಗೊಂಡಿದ್ದು, ಡೋಣಿ-ಗದಗ ನಡುವಿನ ಸಂಚಾರದ ಬಸ್ ನಲ್ಲಿ ಈ ಟಿಕೆಟ್ ನೀಡಲಾಗಿದೆ.

ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯ ಲಾಂಛನ, ಜೈ ಮಹಾರಾಷ್ಟ್ರ ಎಂದು ಬರೆದಿರುವ ಟಿಕೆಟ್ ವೈರಲ್ ಆಗಿದೆ. ವಿಷಯ ತಿಳಿದ ಗದಗ ಸಾರಿಗೆ ವಿಭಾಗದ ಅಧಿಕಾರಿಗಳು ಟಿಕೆಟ್ ರೋಲ್ ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ. ಆದರೆ, ಈ ರೀತಿಯ ಮುದ್ರಣವಾಗಿದ್ದು ಹೇಗೆ? ಇದನ್ನು ಅಧಿಕಾರಿಗಳು, ಸಿಬ್ಬಂದಿ ಗುರುತಿಸದೆ ಹೋಗಿದ್ದು ಹೇಗೆ ಅನ್ನೋ ಪ್ರಶ್ನೆ ಮೂಡಿದ್ದು ಸಾರ್ವನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!