ಯುಪಿಯಲ್ಲೂ ನಾಯಕತ್ವದ ಕುರ್ಚಿ ಅಲುಗಾಡುತ್ತಿದೆ!

649

ಪ್ರಜಾಸ್ತ್ರ ಸುದ್ದಿ

ಲಖನೌ: ಕರ್ನಾಟಕದಲ್ಲಿ ಬಿಜೆಪಿಯಲ್ಲಿ ನಾಯಕತ್ವದ ಬದಲಾವಣೆಯ ಚರ್ಚೆ ಜೋರಾಗಿದೆ. ರಾಜ್ಯ ವಸ್ತುವಾರಿ ಅರುಣ ಸಿಂಗ್, ನಾಯಕತ್ವ ಬದಲಾವಣೆ ಇಲ್ಲವೆಂದು ಹೇಳಿದ್ದಾರೆ. ಆದ್ರೂ, ಒಳಗೊಳಗೆ ಮಸಲತ್ತು ನಡೆದಿದೆ. ಈ ಪಾಲಿಟಿಕ್ಸ್ ಉತ್ತರ ಪ್ರದೇಶದಲ್ಲೂ ನಡೆದಿದೆ. ಹೀಗಾಗಿ ಸಿಎಂ ಯೋಗಿ ಆದಿತ್ಯನಾಥ ಕುರ್ಚಿಗೆ ಕುತ್ತು ಬಂದಿದೆ.

ಸಿಎಂ ಯೋಗಿ ನೇತೃತ್ವದ ಬಿಜೆಪಿ ಸರ್ಕಾರ ಯುಪಿಯಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿದೆ. ಯೋಗಿ ಸರ್ಕಾರದಲ್ಲಿ ಅಧಿಕಾರಿಗಳು ಆಡಳಿತ ನಡೆಸ್ತಿದ್ದಾರೆ ಅನ್ನೋ ಗಂಭೀರ ಆರೋಪವಿದೆ. ಹೀಗಾಗಿ ಸರ್ಕಾರಿ ವಿರೋಧಿ ಅಲೆ ಎದ್ದಿದ್ದು, ಯೋಗಿ ಆದಿತ್ಯನಾಥ ಜಾಗಕ್ಕೆ ಕೇಶವಪ್ರಸಾದ ಮೌರ್ಯ ಅವರನ್ನ ತರುವ ಚಿಂತನೆ ನಡೆದಿದೆಯಂತೆ.

ಗುರುವಾರ ಗೃಹ ಸಚಿವ ಅಮಿತ ಶಾ ಜೊತೆ ಚರ್ಚೆ ನಡೆಸಿರುವ ಯೋಗಿ ಆದಿತ್ಯನಾಥ, ಇಂದು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆಗೆ ಚರ್ಚೆ ನಡೆಸಲಿದ್ದಾರಂತೆ. ಮುಂದಿನ ಚುನಾವಣೆಗೂ ಮೊದ್ಲೇ ಯುಪಿಯಲ್ಲಿಯೂ ಸಿಎಂ ಬದಲಾವಣೆಯಾದ್ರೆ ಅಚ್ಚರಿ ಇಲ್ಲ ಎನ್ನಬಹುದು.




Leave a Reply

Your email address will not be published. Required fields are marked *

error: Content is protected !!