ಬ್ರೇಕಿಂಗ್ ನ್ಯೂಸ್
Search

ಹಾಟ್ ಸಾಂಗ್.. ಆರ್-ಪಿ ಟಾಕ್ ಫೈಟ್

1346

ನಟಿ ರಚಿತಾ ರಾಮ್ ಹಾಗೂ ನಟಿ ಪ್ರಿಯಾಂಕಾ ಉಪೇಂದ್ರ ನಡುವೆ ಇದೀಗ ಟಾಕ್ ಫೈಟ್ ಶುರುವಾಗಿದೆ. ಐ ಲವ್ ಯೂ ಸಿನಿಮಾದಲ್ಲಿನ ಆ ಒಂದು ಹಾಡಿಗಾಗಿ ಇದೀಗ ಇಬ್ಬರು ನಟಿಯರು ಗರಂ ಆಗಿದ್ದಾರೆ.

ಆರ್.ಚಂದ್ರು ನಿರ್ದೇಶನದ ಐ ಲವ್ ಯೂ ಸಿನಿಮಾದಲ್ಲಿನ ‘ಮಾತನಾಡಿ ಮಾಯವಾದೆ’ ಸಾಂಗ್ ರಿಲೀಸ್ ಆಗಿದೆ. ಈ ಸಾಂಗ್ ಅನ್ನು ಸಖತ್ ಹಾಟ್ ಆಗಿ ಶೂಟ್ ಮಾಡಲಾಗಿದ್ದು, ಉಪ್ಪಿ ಅಭಿಮಾನಿಗಳು ಖುಷಿಯಾದ್ರೆ, ರಚಿತಾ ರಾಮ್ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರಂತೆ. ಈ ಬಗ್ಗೆ ನಟಿ ರಚಿತಾ ಹೋದಲ್ಲಿ ಬಂದಲ್ಲಿ ಹೇಳ್ತಿದ್ದು, ಇದಕ್ಕೆ ನಟಿ ಪ್ರಿಯಾಂಕಾ ಉಪೇಂದ್ರ ಸಿಟ್ಟಾಗಿದ್ದಾರೆ.

ಈ ಬಗ್ಗೆ ನಾನು ಉಪೇಂದ್ರ ಅವರನ್ನ ಸಹ ಕೇಳಿದ್ದೆ. ಅದು ಸಿನಿಮಾದ ಒಂದು ಭಾಗ ಅಂದಿದ್ರು. ರಚಿತಾ ರಾಮ್ ಗಾಂಧಿನಗರಕ್ಕೆ ಹೊಸಬಳಲ್ಲ. ಆ ಹಾಡು ಉಪೇಂದ್ರ ನಿರ್ದೇಶನ ಮಾಡಿದ್ದು ಅಂತಾ ಎಲ್ಲ ಕಡೆ ಅವರೊಬ್ಬರ ಹೆಸರು ಹೇಳ್ತಿದ್ದಾರೆ. ಈ ಮೊದಲು ಸಾಂಗ್ ಚೆನ್ನಾಗಿ ಬಂದಿದೆ ಅಂದವರು ಇದೀಗ ಬರೀ ಉಪೇಂದ್ರ ಕಡೆ ಬೊಟ್ಟು ಮಾಡ್ತಿರೋದು ಸರಿಯಲ್ಲ. ಸಿನಿಮಾ ಬಗ್ಗೆ ಮಾತ್ನಾಡಲು ಸಾಕಷ್ಟು ವಿಚಾರಗಳಿವೆ ಅಂತಾ ಗರಂ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!