ನ್ಯಾಯಕ್ಕಾಗಿ ಸಿಂದಗಿಯಲ್ಲಿ ಫಾರ್ಮಾಸಿಸ್ಟ್ ಮೌನ ಹೋರಾಟ

519

ಸಿಂದಗಿ: ಫಾರ್ಮಾಸಿಸ್ಟ್ ನೌಕರರ ಪ್ರಮುಖ ಬೇಡಿಕೆಗಳಾದ ವೇತನ ಹಾಗೂ ಭತ್ಯೆಗಳಲ್ಲಿ ಸಾಕಷ್ಟು ವ್ಯತ್ಯಾಸ ಇರೋವುದನ್ನ ಖಂಡಿಸುವುದರ ಜೊತೆಗೆ ಇತರೆ ನ್ಯಾಯಸಮ್ಮತ ಬೇಡಿಕೆಗಳನ್ನ ಈಡೇರಿಸುವ ಸಲುವಾಗಿ ಶಾಂತಿಯುತ ಪ್ರತಿಭಟನೆ ನಡೆಸಲಾಗ್ತಿದೆ.

ಶಾಂತಿಯುತ ಪ್ರತಿಭಟನೆಯಲ್ಲಿ ಸಿಂದಗಿ ಜನರಲ್ ಆಸ್ಪತ್ರೆಯ ಸಿನೀಯರ್ ಫಾರ್ಮಾಸಿಸ್ಟ್ ಆಗಿರುವ ಶಂಕರ ಮಳ್ಳಿ ಅವರು ಭಾಗವಹಿಸಿದ್ದಾರೆ. ಇವರು ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಹಾಗೂ ವಿಜಯಪುರದ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸ್ತಿದ್ದು, ತಮ್ಮ ನೋವಿಗೆ ಯಾರಿಗೂ ಸ್ಪಂದಿಸ್ತಿಲ್ಲ ಅಂತಾ ಬೇಸರ ವ್ಯಕ್ತಪಡಿಸ್ತಿದ್ದಾರೆ.

ಜಾಹೀರಾತು

ಸಿಂದಗಿ ಜನರಲ್ ಆಸ್ಪತ್ರೆಯಲ್ಲಿ ಒಬ್ಬರು ಫಾರ್ಮಾಸಿಸ್ಟ್, 3 ಸಮುದಾಯ ಆಸ್ಪತ್ರೆಗಳಲ್ಲಿ ಒಬ್ಬೊಬ್ಬರು ಹಾಗೂ ಪಿಎಚ್ ನಲ್ಲಿ 8 ಪಾರ್ಮಾಸಿಸ್ಟ್ ಕಾರ್ಯನಿರ್ವಹಿಸ್ತಿದ್ದಾರೆ. ಜಿಲ್ಲೆಯಲ್ಲಿ ಗುತ್ತಿಗೆಯಾಧರಿತ ಸೇರಿದಂತೆ 110 ಜನ ಫಾರ್ಮಾಸಿಸ್ಟ್ ಗಳು ಕೆಲಸ ಮಾಡ್ತಿದ್ದು, ಸಾರ್ವಜನಿಕರಿಗೆ ಸೇವೆ ನೀಡುತ್ತಲೇ ತಮ್ಮ ಬೇಡಿಕೆಗಾಗಿ ಹೋರಾಟ ನಡೆಸಿದ್ದಾರೆ. ಈ ಸಂಬಂಧ ಜನವರಿ 2ರಂದು ಜಿಲ್ಲಾಧಿಕಾರಿಗೆ ಮನವಿ ಸಹ ಸಲ್ಲಿಸಿದ್ದಾರೆ.

ಪ್ರಾಥಮಿಕ ಹಂತವಾಗಿ ಜನವರಿ 2, 2020 ರಿಂದ ಜನವರಿ 12, 2020ರ ವರೆಗೂ ರಾಜ್ಯದ ಎಲ್ಲ ಫಾರ್ಮಾಸಿಸ್ಟ್ ನೌಕರರು ಕಪ್ಪು ಪಟ್ಟಿಯನ್ನ ಕಟ್ಟಿಕೊಂಡು ಸೇವೆ ಮಾಡುವುದರ ಜೊತೆಗೆ ತಮ್ಮ ಪ್ರತಿರೋಧವನ್ನ ತೋರಿಸ್ತಿದ್ದಾರೆ. ಎರಡನೇ ಹಂತವಾಗಿ ಜನವರಿ 30ರಂದು ಫ್ರೀಡಂ ಫಾರ್ಕ್ ದಿಂದ ಆಯುಕ್ತರ ಕಚೇರಿವರೆಗೂ ಶಾಂತಿಯುತ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ.

ಪ್ರತಿಯೊಂದು ಇಲಾಖೆಯಲ್ಲಿ ಹುದ್ದೆಗೆ ಸೇರಿದ್ಮೇಲೆ ಹಂತ ಹಂತವಾಗಿ ಪ್ರಮೋಷನ್ ಇದೆ. ಫಾರ್ಮಾಸಿಸ್ಟ್ ನಲ್ಲಿ ಇಲ್ಲ. ಸೀನಿಯರ್ ಫಾರ್ಮಾಸಿಸ್ಟ್ ಅನ್ನೋದು ಲಾಸ್ಟ್. ರೋಗಿಗಳ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಜೊತೆ ನಮ್ಮ ಪಾತ್ರವೂ ದೊಡ್ಡದಿದೆ. ಆದ್ರೆ ವೇತನ, ಭತ್ಯೆ ಕಡಿಮೆ. ಇದನ್ನ ಸರ್ಕಾರ ಹಾಗೂ ಅಧಿಕಾರಿಗಳು ಅರ್ಥ ಮಾಡಿಕೊಳ್ತಿಲ್ಲ. ಹೀಗಾಗಿ ನ್ಯಾಯಸಮ್ಮತ ಬೇಡಿಕೆಗಾಗಿ ಹೋರಾಟ ನಡೆಸಿದ್ದೇವೆ.

ಶಂಕರ ಮಳ್ಳಿ, ಸೀನಿಯರ್ ಫಾರ್ಮಾಸಿಸ್ಟ್, ಸಿಂದಗಿ ತಾಲೂಕು ಆಸ್ಪತ್ರೆ

ಸೇವೆ ಜೊತೆಗಿನ ಪ್ರತಿಭಟನೆಯಲ್ಲಿ ಫಾರ್ಮಾಸಿಸ್ಟ್ ಗಳಾದ ಎಸ್.ಜಿ ಶಾಹಪೂರ, ಚಂದ್ರಶೇಖರ ಲೆಂಡಿ, ಅಶೋಕ ತೆಲ್ಲೂರ, ಪ್ರವೀಣ ಹೊಳಿ, ಪ್ರದೀಪಕುಮಾರ ಕ್ಯಾತನ್, ಸುರೇಶಕುಮಾರ ಶೇಡಶ್ಯಾಳ, ಜುಬೇರ ಕೆರೂರ, ಅಂಜನಾ ಬಿರಾದಾರ, ಅರ್ಚನಾ ನಾಟೀಕಾರ ಪ್ರತಿಯೊಬ್ಬರು ಭಾಗವಹಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!