ರಾತ್ರಿ ಪಿಂಕ್ ಮೂನ್.. ನಾಳೆ ಬೆಳಗ್ಗೆ ಸೂಪರ್ ಮೂನ್

417

ಬೆಂಗಳೂರು: ಡೆಡ್ಲಿ ಕರೋನಾ ಕಿರಿಕಿರಿ ನಡುವೆ ಇಂದು ಆಗಸದಲ್ಲಿ ಪಿಂಕ್ ಮೂನ್ ಕಾಣಿಸಿಕೊಳ್ಳಲಿದ್ದಾನೆ. ಈ ಮೂಲಕ 2020ರಲ್ಲಿ ಬಿಗ್ ಮೂನ್ ಕಾಣಿಸಿಕೊಳ್ಳಲಿದ್ದಾನೆ. ಇದನ್ನ ನೋಡುವ ಮೂಲಕ ಒಂದಿಷ್ಟು ಖುಷಿಯನ್ನ ಅನುಭವಿಸಬಹುದು. ಇನ್ನು ನಾಳೆ ಬೆಳಗ್ಗೆ 8.05ಕ್ಕೆ ಸೂಪರ್ ಮೂನ್ ಕಾಣಿಸಿಕೊಳ್ಳಲಿದ್ದಾನೆ.

ನಾಳೆ ಬನದ ಹುಣ್ಣಿಮೆ, ಚೈತ್ರ ಪೂರ್ಣಿಮಾ ಹಿನ್ನೆಲೆಯಲ್ಲಿ ಬೃಹತ್ ಚಂದ್ರ ಕಾಣಿಸಿಕೊಳ್ಳಲಿದ್ದಾನೆ. ಇಂದು ರಾತ್ರಿಯಿಂದ ನಾಳೆ ಬೆಳಗ್ಗೆ 8.5ಕ್ಕೆ ಚಂದ್ರನ ಪೂರ್ತಿರೂಪ ಕಾಣಿಸಿಕೊಳ್ಳಲಿದೆ. ಭೂಮಿಗೆ ಅತೀ ಸಮೀಪ ಬರಲಿದ್ದಾನೆ. ಅಂದ್ರೆ, 3.63 ಲಕ್ಷ ಕಿಲೋ ಮೀಟರ್ ದೂರದಲ್ಲಿ ಕಾಣಿಸಿಕೊಳ್ಳುವುದ್ರಿಂದ ದೊಡ್ಡದಾಗಿ ಕಾಣಿಸುತ್ತೆ. ಸಾಮಾನ್ಯವಾಗಿ 4.05 ಲಕ್ಷ ಕಿಲೋ ಮೀಟರ್ ದೂರದಲ್ಲಿರುವುದ್ರಿಂದ ಚಿಕ್ಕದಾಗಿ ಕಾಣಿಸುತ್ತಾನೆ.

ಪಿಂಕ್ ಮತ್ತು ಸೂಪರ್ ಮೂನ್ ಅಂದ್ರೆ ಏನು?

ಪಿಂಕ್ ಮೂನ್ ಅಂದ್ರೆ ಗುಲಾಬಿ ಚಂದ್ರ. ಹಾಗಂದ ಮಾತ್ರಕ್ಕೆ ಚಂದ್ರ ಗುಲಾಬಿ ಬಣ್ಣದಲ್ಲಿ ಕಾಣಿಸುವುದಿಲ್ಲ. ಉತ್ತರ ಅಮೆರಿಕದಲ್ಲಿ ವಸಂತ ಋತುವುನಲ್ಲಿ ಅರಳುವ ಕೇಸರಿ ಬಣ್ಣದ ಗ್ರೌಂಡ್ ಪ್ಲೋಕ್ಸ್ ಎಂಬ ಕಾಡು ಹೂವಿನ ಹೆಸರು. ಇದೊಂದು ವಿಭಿನ್ನ ಹೂವು ಆಗಿದ್ದು, ಅದೆ ಹೆಸರನ್ನ ಚಂದ್ರನಿಗೆ ಇಡಲಾಗಿದೆ. ಇದು ಎಂದಿಗಿಂತ ಪ್ರಕಾಶಮಾನವಾಗಿ ಗೋಚರಿಸಲಿದ್ದು ಹೀಗಾಗಿ ಪಿಂಕ್ ಮೂನ್ ಎನ್ನಲಾಗುತ್ತೆ.

ಇನ್ನು ಸೂಪರ್ ಮೂನ್ ಅಂದ್ರೆ, ಚಂದ್ರ ಎಂದಿಗಿಂತ ದೊಡ್ಡದಾಗಿ ಕಾಣಿಸಿಕೊಳ್ಳುವುದು. ಇದು ನಾಳೆ ಬೆಳಗ್ಗೆ 8 ಗಂಟೆ 5 ನಿಮಿಷಕ್ಕೆ ಭಾರತದಲ್ಲಿ ಗೋಚರಿಸಲಿದೆ. ಇದನ್ನ ಮೋಡದಲ್ಲಿ ಯಾವುದೇ ಮುಂಜು ಮುಸುಕಿದ ವಾತಾವರಣ ಇಲ್ಲದೆ ಹೋದ್ರೆ ಸ್ಪಷ್ಟವಾಗಿ ಕಾಣಿಸುತ್ತೆ. 2020ರಲ್ಲಿ 2ನೇ ಬಾರಿಗೆ ಸೂಪರ್ ಮೂನ್ ಕಾಣಿಸಿಕೊಳ್ತಿದ್ದಾನೆ. ಮಾರ್ಚ್ 9ರಂದು ಸಹ ಕಾಣಿಸಿಕೊಂಡಿದ್ದ. ಹೀಗಾಗಿ ಮನೆಯ ಟೆರಸ್ ಮೇಲೆ, ಬಾಲ್ಕನಿ ಮೇಲೆ ನಿಂತುಕೊಂಡು ನೋಡುವ ಮೂಲಕ ಖುಷಿಯನ್ನ ಅನುಭವಿಸಬಹುದು.




Leave a Reply

Your email address will not be published. Required fields are marked *

error: Content is protected !!