6 ವರ್ಷ.. 58 ವಿದೇಶಿ ಪ್ರವಾಸ.. ಪ್ರಧಾನಿಗೆ ಖರ್ಚಾಗಿದೆಷ್ಟು ಕೋಟಿ?

318

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2015ರಿಂದ ಇಲ್ಲಿಯವರೆಗೆ ಕೈಗೊಂಡ ವಿದೇಶ ಪ್ರವಾಸದ ಅಂಕಿಸಂಖ್ಯೆ ಹಾಗೂ ಅದಕ್ಕೆ ಖರ್ಚಾದ ಹಣವೆಷ್ಟು ಎಂದು ರಾಜ್ಯಸಭೆಗೆ ಕೇಂದ್ರ ಸರ್ಕಾರ ನೀಡಿದೆ.

ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರು ಕೇಳಿದ ಮಾಹಿತಿಗೆ ಸಂಬಂಧಿಸಿದಂತೆ, ಕಳೆದ 6 ವರ್ಷಗಳಲ್ಲಿ ಪ್ರಧಾನಿ ಮೋದಿ ಭೇಟಿ ನೀಡಿದ ದೇಶ ಹಾಗೂ ಖರ್ಚಿನ ಲೆಕ್ಕ ನೀಡಲಾಗಿದೆ. ಪ್ರಧಾನಿ ಮೋದಿ ಕಳೆದ 6 ವರ್ಷಗಳಲ್ಲಿ 58 ದೇಶಗಳಿಗೆ ಭೇಟಿ ನೀಡಿದ್ದಾರೆ. ಇದಕ್ಕಾಗಿ 517.82 ಕೋಟಿ ರೂಪಾಯಿ ಖರ್ಚಾಗಿದೆ.

ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ ಮುರುಳಿಧರನ್ ಅವರು ಲಿಖಿತ ರೂಪದಲ್ಲಿ ರಾಜ್ಯಸಭೆಗೆ ಉತ್ತರ ನೀಡಿದ್ದಾರೆ. 58 ದೇಶಗಳ ಭೇಟಿಗಾಗಿ 517.82 ಕೋಟಿ ರೂಪಾಯಿ ಖರ್ಚಾಗಿದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!