RRR ಸಿನ್ಮಾ ಉಳಿದ ಶೂಟಿಂಗ್ ಗೆ ರಾಜಮೌಳಿ ರೆಡಿ?

420

ನಿರ್ದೇಶಕ ರಾಜಮೌಳಿ ಆಕ್ಷನ್ ಕಟ್ ಹೇಳಿರುವ RRR (ರೌದ್ರ ರಣ ರುಧಿರ) ಮೂವಿ, ಸಾಕಷ್ಟು ನಿರೀಕ್ಷೆ ಮೂಡಿದೆ. ಬರೋಬ್ಬರಿ 300 ಕೋಟಿ ಬಜೆಟ್ ನಲ್ಲಿ ಚಿತ್ರ ನಿರ್ಮಾಣವಾಗಿದ್ದು, ಈಗಾಗ್ಲೇ ಒಮ್ಮೆ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಇದೀಗ ಮತ್ತೊಮ್ಮೆ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ ಎನ್ನಲಾಗ್ತಿದೆ.

ಐತಿಹಾಸಿಕ ಕಥೆಯನ್ನ ಹೊಂದಿರುವ ಚಿತ್ರದಲ್ಲಿ ಜ್ಯೂನಿಯರ್ ಎನ್ ಟಿಆರ್, ರಾಮಚರಣ ತೇಜ, ಅಜಯ ದೇವಗನ್ ಸೇರಿದಂತೆ ಮೆಲ್ಟಿಸ್ಟಾರ್ ಇರುವ ಚಿತ್ರ ಕನ್ನಡ, ತೆಲುಗು, ತಮಿಳು ಸೇರಿದಂತೆ 10 ಭಾಷೆಯಲ್ಲಿ ರೆಡಿಯಾಗ್ತಿದೆ. ಈ ಮೊದ್ಲು ಜುಲೈ 30ಕ್ಕೆ ಸಿನ್ಮಾ ರಿಲೀಸ್ ಎನ್ನಲಾಗಿತ್ತು. ಬಳಿಕ ಮುಂದಿನ ಸಂಕ್ರಾಂತಿಗೆ ಅನೌನ್ಸ್ ಆಗಿತ್ತು. ಶೇಕಡ 70ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದೆ.

ಆದ್ರೆ, ಲಾಕ್ ಡೌನ್ ನಿಂದಾಗಿ ಉಳಿದ ಶೂಟಿಂಗ್ ಬಾಕಿ ಉಳಿದಿದೆ. ಹೀಗಾಗಿ ಒಪ್ಪಿಗೆ ಪಡೆದು, ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡು ಶೂಟಿಂಗ್ ಶುರು ಮಾಡುವ ಪ್ಲಾನ್ ಮಾಡಲಾಗ್ತಿದೆ ಅನ್ನೋದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!