‘ಮಹಾನಟಿ’ ಶ್ರೀಮತಿಯಾಗಲು ರೆಡಿ

370

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ ಕಲ್ಯಾಣೋತ್ಸವ ನಡೆಯಲಿದೆಯಂತೆ. ಬಿಗ್ ಬ್ರೇಕಿಂಗ್ ನ್ಯೂಸ್ ನೀಡುವ ಮೂಲಕ ಅಪಾರ ಅಭಿಮಾನಿಗಳ ಹಾರ್ಟ್ ಬ್ರೇಕ್ ಮಾಡಿದ್ದಾರೆ. ಮುದ್ದು ಮುಖದ ಚೆಲುವೆ ತನ್ನ ನಟನೆ ಹಾಗೂ ಸೌಂದರ್ಯದಿಂದ ಸಾಕಷ್ಟು ಜನರ ನಿದ್ದೆ ಕದ್ದವಳು. ಅಂಥಾ ನಟಿ ಇದೀಗ ಮದುವೆಗೆ ರೆಡಿಯಾಗ್ತಿದ್ದಾರಂತೆ.

ಸಾಕಷ್ಟು ಸಿನ್ಮಾಗಳಲ್ಲಿ ಬ್ಯುಸಿಯಾಗಿರುವ ನಟಿಗೆ ಮದ್ವೆ ಮಾಡಲು ಪೋಷಕರು ನಿರ್ಧರಿಸಿದ್ದಾರಂತೆ. ನಟಿ ಕೀರ್ತಿ ಮದ್ವೆಯಾಗ್ತಿರುವ ಹುಡ್ಗ ಮಾತ್ರ ಚಿತ್ರರಂಗಕ್ಕೆ ಸಂಬಂಧಿಸಿದವನಲ್ಲ. ಉದ್ಯಮಿಯೊಬ್ಬನನ್ನ ನಟಿ ವರಿಸಲಿದ್ದಾರೆ ಎಂದು ಹೇಳಲಾಗ್ತಿದೆ.

ತಂದೆ ತಾಯಿ ನೋಡಿದ ಹುಡ್ಗನೊಂದಿಗೆ ಮದ್ವೆಯಾಗಲು ನಟಿ ಕೀರ್ತಿ ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ. ಆದ್ರೆ, ಈ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಅದೇನೇ ಇರ್ಲಿ ನಟಿ ಕೀರ್ತಿ ಸುರೇಶ ಮದುವೆ ವಿಚಾರ ಕೇಳಿದ ಪಡ್ಡೆ ಹುಡ್ಗರು ಬೇಜಾರಾಗ್ತಿರುವುದು ಮಾತ್ರ ಪಕ್ಕಾ.




Leave a Reply

Your email address will not be published. Required fields are marked *

error: Content is protected !!