ಶಿಕ್ಷಣ ಸಚಿವರು, ಸಿಎಂ ಮಾತಿನಿಂದ 10ನೇ ತರಗತಿ ವಿದ್ಯಾರ್ಥಿಗಳಲ್ಲಿ ಮತ್ತೆ ಗೊಂದಲ

269

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಪಿಯುಸಿ ಪರೀಕ್ಷೆ ರದ್ದು ಮಾಡಿರುವುದಾಗಿ ತಿಳಿಸಿದ ಶಿಕ್ಷಣ ಸಚಿವ ಸುರೇಶಕುಮಾರ ಅವರು, ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು, ಕರೋನಾ ಸೋಂಕು ಕಡಿಮೆಯಾದ್ರೆ ಮಾತ್ರ ಪರೀಕ್ಷೆ. ಇಲ್ಲವಾದ್ರೆ ಈ ವರ್ಷ ಪರೀಕ್ಷೆ ಇಲ್ಲವೆಂದು ಹೇಳಿದ್ದಾರೆ.

ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳ ಈ ಮಾತುಗಳಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಪರೀಕ್ಷೆ ಇರುತ್ತಾ ಇರಲ್ಲವಾ ಅನ್ನೋ ಗೊಂದಲದಲ್ಲಿ ವಿದ್ಯಾರ್ಥಿಗಳು ಓದುವುದು ಹೇಗೆ? ಇಷ್ಟು ದಿನವೂ ಈ ಗೊಂದಲ ಮೂಡಿತ್ತು. ಅದಕ್ಕೆ ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ್ದಾರೆ ಎಂದುಕೊಳ್ಳುವಷ್ಟರಲ್ಲಿ ಸಿಎಂ ಮಾತು ಮತ್ತೆ ಗೊಂದಲ ಮೂಡಿಸಿದೆ.

ಒಂದೇ ಪ್ರಶ್ನೆ ಪತ್ರಿಕೆಯಲ್ಲಿ 3 ವಿಷಯಗಳು 2 ಬಾರಿ ಪರೀಕ್ಷೆ ನಡೆಸಲಾಗುತ್ತೆ. ಪ್ರತಿ ವಿಷಯಕ್ಕೆ 40 ಮಾರ್ಕ್ಸ್ ಗಳೆಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಈ ಹೊಸ ಮಾದರಿ ವಿದ್ಯಾರ್ಥಿಗಳು ಎದುರಿಸುವುದು ಹೇಗೆ ಅಂತಿರುವಾಗ ಸಿಎಂ ಹೇಳಿಕೆ ಮತ್ತಷ್ಟು ಟೆನ್ಷನ್ ಮೂಡಿಸಿದ್ದು, ಸರ್ಕಾರ ಯಾಕೆ ಹೀಗೆ ನಡೆದುಕೊಳ್ಳುತ್ತಿದೆ ಅನ್ನೋದು ಮಾತ್ರ ಜನರಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.




Leave a Reply

Your email address will not be published. Required fields are marked *

error: Content is protected !!