ಟಿ-20 ವಿಶ್ವಕಪ್: ಆಸೀಸ್ ಗೆ ಹಾರಿದ ಟೀಂ ಇಂಡಿಯಾ

231

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಟಿ-20 ವರ್ಲ್ಡ್ ಕಪ್ ನಡೆಯಲಿದೆ. ಹೀಗಾಗಿ ಟೀಂ ಇಂಡಿಯಾ ಗುರುವಾರ ಆಸೀಸ್ ಗೆ ಪ್ರಯಾಣ ಬೆಳೆಸಿದೆ. ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಆಡಳಿತಾತ್ಮಕ ತಂಡ, ರೋಹಿತ್ ಶರ್ಮಾ ನಾಯಕತ್ವದ ತಂಡ ಫ್ಲೈಟ್ ಏರಿದೆ.

ಟ್ವೀಟರ್ ನಲ್ಲಿ ಎಲ್ಲರೂ ಒಟ್ಟಿಗೆ ನಿಂತು ತೆಗೆಸಿಕೊಂಡ ಫೋಟೋ ಪೋಸ್ಟ್ ಮಾಡಿ, ಫಿಕ್ಚರ್ ಪರ್ಫೆಕ್ಟ್. ಲೆಟ್ಡ್ ಡು ದಿಸ್ ಟೀಂ ಇಂಡಿಯಾ @ಕ್ರಿಕೆಟ್ ವರ್ಲ್ಡ್ ಕಪ್ ಎಂದು ಬರೆಯಲಾಗಿದೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯೆ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದೀಪಕ್ ಹೂಡಾ, ಯಜುವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್ 14 ಮಂದಿಯ ತಂಡದಲ್ಲಿದ್ದಾರೆ.

ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಸೋನಿ, ದೀಪಕ್ ಚಹರ್ ಹೆಚ್ಚುವರಿ ಆಟಗಾರರಿದ್ದಾರೆ. ಅಕ್ಟೋಬರ್ 17ರಂದು ಆಸ್ಟ್ರೇಲಿಯಾ, 19ರಂದು ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ. ಅ.23ರಂದು ಪಾಕ್ ವಿರುದ್ಧ ಮೊದಲ ಪಂದ್ಯ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!