ಬ್ರೇಕಿಂಗ್ ನ್ಯೂಸ್
Search

ಕನ್ನಡದಲ್ಲಿ ಹಾಲಿವುಡ್ ಚಿತ್ರ.. ಸುದೀಪ ಸಾಥ್ ಕೊಟ್ಟಿದ್ದು ಹೇಗೆ?

426

ಕನ್ನಡ ಚಿತ್ರರಂಗಕ್ಕೆ ಇದೀಗ ಬೇರೆ ಬೇರೆ ಭಾಷೆಯ ಚಿತ್ರಗಳು ಡಬ್ ಆಗಿ ಲಗ್ಗೆ ಇಡುತ್ತಿವೆ. ತೆಲುಗು, ತಮಿಳು, ಹಿಂದಿ ಸಿನ್ಮಾಗಳೆಲ್ಲ ಕನ್ನಡಕ್ಕೆ ಡಬ್ ಆಗಿ ಬರ್ತಿವೆ. ಈ ಸಾಲಿಗೆ ಇದೀಗ ಹಾಲಿವುಡ್ ಸೂಪರ್ ಹಿಟ್ ಸರಣಿ ಸಿನ್ಮಾ ಸೇರಿಕೊಂಡಿದೆ.

ಹಾಲಿವುಡ್ ಆ್ಯಕ್ಷನ್ ಸಿನ್ಮಾ ನೋಡುವ ಪ್ರತಿಯೊಬ್ಬರಿಗೂ ಅರ್ನಾಲ್ಡ್ ಗೊತ್ತು. ಒಂದು ಕಾಲದಲ್ಲಿ ಬಾಡಿ ಬಿಲ್ಡರ್ ಪ್ರಪಂಚವನ್ನ ಆಳಿದವರು. 72 ವರ್ಷದ ಸೂಪರ್ ಸ್ಟಾರ್ ನಟನೆಯ ಟರ್ಮಿನೇಟರ್ ಡಾರ್ಕ್ ಫೇಟ್ ಸರಣಿಯ 6ನೇ ಚಿತ್ರ ಕನ್ನಡಕ್ಕೆ ಬರ್ತಿದೆ. ಇದಕ್ಕೆ ಕಿಚ್ಚ ಸುದೀಪ ಸಾಥ್ ನೀಡಿದ್ದಾರೆ. ಅಲ್ದೇ, 30 ಸೆಕೆಂಡಿನ ಟೀಸರ್ ಅವರ ಟ್ವೀಟರ್ ನಲ್ಲಿ ಅಪ್ಲೋಡ್ ಮಾಡಿದ್ದು, 1.30 ನಿಮಿಷದ ಟ್ರೇಲರ್ ರಿಲೀಸ್ ಮಾಡ್ತಿದ್ದೀನಿ. ಯಾವಾಗ ಅನ್ನೋದು ಹೇಳ್ತೀನಿ ಅಂದಿದ್ದಾರೆ.

ಟ್ವೀಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟ ಸುದೀಪ, ಅರ್ನಾಲ್ಡ್ ದೊಡ್ಡ ಆ್ಯಕ್ಷನ್ ಹೀರೋಗಳಲ್ಲಿ ಒಬ್ಬರು. ನಾನು ಅವರ ಅಭಿಮಾನಿ ಕೂಡ ಹೌದು. ಟರ್ಮಿನೇಟರ್ ಪ್ರ್ಯಾಂಚೈಸ್ ನನ್ನಲ್ಲಿರುವ ಅಭಿಮಾನಿಯನ್ನ ರೋಮಾಂಚನಗೊಳಿಸಿದೆ ಎಂದಿದ್ದಾರೆ. ಟೀಮ್ ಮಿಲ್ಲರ್ ನಿರ್ದೇಶನದ ಚಿತ್ರ ನವೆಂಬರ್ 1ಕ್ಕೆ ತೆರೆಗೆ ಬರ್ತಿದೆ.




Leave a Reply

Your email address will not be published. Required fields are marked *

error: Content is protected !!