ವಿಧವೆ ಸೊಸೆಗೆ ಮರುಮದುವೆ ಮಾಡಿಸಿದ ಅತ್ತೆ

621

ದಕ್ಷಿಣ ಕನ್ನಡ: ಇದು ನಿಜಕ್ಕೂ ಮೆಚ್ಚುವ ಕೆಲಸ. ಓರ್ವ ಅತ್ತೆಯಾದವಳು ಸೊಸೆಗಾಗಿ ಇಂಥಾ ನಿರ್ಧಾರ ಮಾಡಿರೋದು. ಗಂಡಿನ ಕಡೆಯವರು ಈ ವಿಚಾರದಲ್ಲಿ ಮುಂದೆ ಬಂದಿರೋದು ಖುಷಿಯ ಸಂಗತಿ. ಅದೇನಪ್ಪ ಅಂದ್ರೆ, ಒಂದು ಮಗುವಿನ ವಿಧವೆ ಹೆಣ್ಣನು ಮದುವೆಯಾಗಿರೋದು.

ಅತ್ತೆ ಸೂಸೆ ಅಂದ್ರೆ ಆಗಿ ಬರೋದಿಲ್ಲ. ತುಂಬು ಕುಟುಂಬ ಕಡಿಮೆಯಾಗಿ, ಗಂಡ, ಹೆಂಡ್ತಿ ಮತ್ತು ಮಕ್ಕಳು ಇಷ್ಟೇ ಸಂಸಾರ ಅನ್ನೋ ಕಾಲವಿದು. ಹೀಗಿರುವಾಗ, ಒಂದು ವರ್ಷದ ಹಿಂದೆ ತನ್ನ ಮಗ ತೀರಿಕೊಂಡ್ಮೇಲೆ ಸೊಸೆಗೆ ಇನ್ನೊಂದು ಮದುವೆಯನ್ನ ಅತ್ತೆ ಮಾಡಿಸಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಳಂಜ ಗ್ರಾಮದ ಗೋಪಾಲಕಜೆಯಲ್ಲಿ ಇಂತಹದೊಂದು ಅಪರೂಪದ ಮದುವೆ ನಡೆದಿದೆ.

ಜಯಪ್ರಕಾಶ ಹಾಗೂ ಸುಶೀಲಾ ಜೋಡಿಯ ಮದುವೆ ಗುರುಹಿರಿಯರ ಸಮ್ಮುಖದಲ್ಲಿ ನಡೆದಿದೆ. ಇನ್ನು ದಿವಂಗತ ಪದ್ಮಯ್ಯ ಎಂಬುವವರ ಪುತ್ರ ಮಾಧವನ ಜೊತೆ ಸುಶೀಲಾ ಅನ್ನೋ ಹುಡ್ಗಿಯ ಮದುವೆ ಕಳೆದೊಂದು ವರ್ಷದ ಹಿಂದೆ ನಡೆದಿತ್ತು. ಆದ್ರೆ, ಸುಶೀಲಾ ಪತಿ ಮಾಧವ ಆಕಸ್ಮಿಕವಾಗಿ ಸಾವನ್ನಪ್ಪಿದ್ರು. ಆ ಟೈಂನಲ್ಲಿ ಸುಶೀಲಾ ಗರ್ಭಿಣಿಯಾಗಿದ್ರು. ಇದೀಗ ಸುಶೀಲಾಗೆ ಒಂದು ಗಂಡು ಮಗುವಿದೆ.

ಸಣ್ಣ ವಯಸ್ಸಿನ ಸೊಸೆಯ ಜೀವನ ಹಾಳಾಗಬಾರದು ಅನ್ನೋ ಕಾರಣಕ್ಕೆ, ಅತ್ತೆ ಸುಶೀಲಾಗೆ ಇನ್ನೊಂದು ಮದುವೆ ಮಾಡಲು ನಿರ್ಧರಿಸಿದ್ದಾರೆ. ಈ ಮೊದ್ಲು ಇದಕ್ಕೆ ಸುಶೀಲಾ ಒಪ್ಪಿಕೊಂಡಿಲ್ಲ. ಮಗನ ಭವಿಷ್ಯಕ್ಕಾಗಿ ನಾನು ಮರುಮದುವೆಯಾಗುವುದಿಲ್ಲ ಅಂತಾ ಹೇಳಿದ್ದಾರೆ. ಆದ್ರೆ, ಸೂಸೆಯ ಜೀವನ ಹಾಳಾಗಬಾರದು ಅನ್ನೋ ಕಾರಣಕ್ಕೆ ಕುಂಇಕ್ಕ ಅನ್ನೋ ಮಹಿಳೆ ತಾನೆ ಮುಂದೆ ನಿಂತು ವಿವಾಹ ಕಾರ್ಯ ಮಾಡಿದ್ದಾರೆ.

ಕುಂಇಕ್ಕ ಅನ್ನೋ ಅತ್ತೆಯ ಯೋಚನೆ. ಹೆಣ್ಮಗಳೊಬ್ಬಳ ಜೀವನ ಹಾಳಾಗಬಾರದು ಅನ್ನೋ ಕಾರಣಕ್ಕೆ ಅವರ ತೆಗೆದುಕೊಂಡು ನಿರ್ಧಾರ ಮೆಚ್ಚಬೇಕು. ಇನ್ನೂ ತಾನು ಮದುವೆಯಾಗುವವಳು ವಿಧವೆ. ಅಲ್ದೇ ಒಂದು ಮಗುವಿದೆ ಅನ್ನೋದು ತಿಳಿದು ಆಕೆಗೊಂದು ಬಾಳು ನೀಡಿದ ಜಯಪ್ರಕಾಶ ನಿರ್ಧಾರ ನಿಜಕ್ಕೂ ಖುಷಿ ನೀಡುವಂತದ್ದು. ಈ ತರಹದ ವಿಚಾರಗಳು ಬಂದಾಗ, ಎರಡು ಕುಟುಂಬಗಳು ಒಂದೊಳ್ಳೆ ನಿರ್ಧಾರ ತೆಗೆದುಕೊಂಡಾಗ ಚಿಕ್ಕ ವಯಸ್ಸಿನಲ್ಲಿಯೇ ವಿಧವೆ ಅನ್ನೋ ಪಟ್ಟದಿಂದ ಆಕೆಗೆ ಮುಕ್ತಿ ಸಿಗುತ್ತೆ. ಸಂಸಾರಿಕ ಬದುಕನ್ನ ಸಹ ಕಾಣಬಹುದು.




Leave a Reply

Your email address will not be published. Required fields are marked *

error: Content is protected !!