ನ.4ರಿಂದ ಮಹಿಳೆಯರ ಐಪಿಎಲ್ ಟೂರ್ನಿ

337

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಈಗಾಗ್ಲೇ 2020ನೇ ಸಾಲಿನ ಬಾಯ್ಸ್ ಐಪಿಎಲ್ ಟೂರ್ನಿ ಶುರುವಾಗಿದೆ 26ಕ್ಕೂ ಹೆಚ್ಚು ಪಂದ್ಯಗಳಾಗಿವೆ. ಅಭಿಮಾನಿಗಳು ಹೊಡಿ ಬಡಿ ಕದನವನ್ನ ಫುಲ್ ಎಂಜಾಯ್ ಮಾಡ್ತಿದ್ದಾರೆ. ಇದರ ನಡುವೆ ನವೆಂಬರ್ 4ರಿಂದ ಮಹಿಳೆಯರ ಐಪಿಎಲ್ ಶುರುವಾಗಲಿದೆ.

ಯೆಸ್, ದುಬೈನಲ್ಲಿ 3 ತಂಡಗಳ ಟೂರ್ನಿಯಲ್ಲಿ ವೆಲೋಸಿಟಿ ತಂಡವನ್ನ ಮಿಥಾಲಿ ರಾಜ್, ಟ್ರೇಲ್ ಬ್ಲೇಜರ್ಸ್ ತಂಡದ ಸ್ಮೃತಿ ಮಂದಾನ ಹಾಗೂ ಸೂಪರ್ ನೋವಾಸ್ ಟೀಂ ಕ್ಯಾಪ್ಟನ್ ಆಗಿ ಹರ್ಮನ್ ಪ್ರೀತ್ ಕೌರ್ ಕಣಕ್ಕೆ ಇಳಿಯಲಿದ್ದಾರೆ. ನವೆಂಬರ್ 4ರಿಂದ 9ರವರೆಗೆ ಟೂರ್ನಿ ನಡೆಯಲಿದೆ.

ನ.4ಕ್ಕೆ ವೆಲೋಸಿಟಿ ಹಾಗೂ ಸೂಪರ್ ನೋವಾಸ್, ನ.5ಕ್ಕೆ ವೆಲೋಸಿಟಿ-ಟ್ರೇಲ್ ಬ್ಲೇಜರ್ಸ್, ನ.7ಕ್ಕೆ ಟ್ರೇಲ್ ಬ್ಲೇಜರ್ಸ್-ಸೂಪರ್ ನೋವಾಸ್ ನಡುವೆ ಪಂದ್ಯ ನಡೆಯಲಿದೆ. ನವೆಂಬರ್ 9ಕ್ಕೆ ಫೈನಲ್ ಪಂದ್ಯ ನಡೆಯುತ್ತೆ.




Leave a Reply

Your email address will not be published. Required fields are marked *

error: Content is protected !!