ಹಳ್ಳಿ ಹುಡ್ಗಿಯಾದ ಚುಟುಚುಟು ಬ್ಯೂಟಿ

437

ನಟಿ ಆಶಿಕಾ ರಂಗನಾಥ ಇದೀಗ ಹಳ್ಳಿ ಹುಡ್ಗಿಯಾಗಿ ಕಾಣಿಸಿಕೊಳ್ತಿದ್ದಾಳೆ. ಫಸ್ಟ್ ರ್ಯಾಂಕ್ ರಾಜು ಸಿನ್ಮಾದಿಂದ ನಟಿ ಆಶಿಕಾಳ ಸಿನಿ ಕರಿಯರ್ ಶುರುವಾಯ್ತು. ಇದಾದ್ಮೇಲೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿರುವ ನಟಿ, ಇದೀಗ ರೋರಿಂಗ್ ಸ್ಟಾರ್ ಶ್ರೀಮುರುಳಿ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾಳೆ.

ಯೆಸ್, ನಟ ಶ್ರೀಮುರುಳಿ ನಟನೆಯ ಮದಗಜ ಚಿತ್ರದಲ್ಲಿ ನಟಿ ಆಶಿಕಾ ಕಾಣಿಸಿಕೊಳ್ಳುವುದು ಪಕ್ಕಾ ಆಗಿದ್ದು, ಚಿತ್ರ ತಂಡವೇ ಇದನ್ನ ಅನೌನ್ಸ್ ಮಾಡಿದೆ. ನಿರ್ದೇಶಕ ಮಹೇಶ ಆ್ಯಕ್ಷನ್ ಕಟ್ ಹೇಳ್ತಿರುವ ಚಿತ್ರದಲ್ಲಿ ಆಶಿಕಾ ಹಳ್ಳಿ ಹುಡ್ಗಿಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾಳೆ.

ಅಯೋಗ್ಯ ಚಿತ್ರದ ಬಳಿಕ ನಿರ್ದೇಶಕ ಮಹೇಶಗೆ ಇದು 2ನೇ ಸಿನ್ಮಾ. ಉಮಾಪತಿ ಚಿತ್ರ ನಿರ್ಮಾಣ ಮಾಡ್ತಿದ್ದು, ಫೆಬ್ರವರಿ 20ರಿಂದ ಶೂಟಿಂಗ್ ನಡೆಯಲಿದೆ. ಈ ಮೂವಿಯಲ್ಲಿ ಬಿಗ್ ಸ್ಟಾರ್ ಗಳ ದಂಡೇ ಇರಲಿದೆ ಅಂತಾ ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!