ತಾಲೂಕಿನಾದ್ಯಂತ ಚೌಡಯ್ಯ ಜಯಂತಿ

838

ಸಿಂದಗಿ: ನಾಡಿನ ತುಂಬಾ ಇಂದು ನಿಜಶರಣ ಅಂಬಿಗರ ಚೌಡಯ್ಯನವರ 900ನೇ ಜಯಂತಿಯನ್ನ ಆಚರಿಸಲಾಯ್ತು. ಅದೇ ರೀತಿ ತಾಲೂಕಿನಾದ್ಯಂತ ಚೌಡಯ್ಯನವರ ಜಯಂತ್ಯೋತ್ಸವವನ್ನ ಆಚರಿಸಲಾಗಿದೆ. ತಾಲೂಕು ಆಡಳಿತ ವತಿಯಿಂದ ಪಟ್ಟಣದ ಅಂಬಿಗರ ಚೌಡಯ್ಯನವರ ಮೂರ್ತಿಗೆ ಗೌರವ ಸಲ್ಲಿಸಿ, ತಹಶೀಲ್ದಾರ್ ಕಚೇರಿಯಲ್ಲಿ ಫೋಟೋ ಪೂಜೆ ಮಾಡಿ ಸರಳವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಯಂತಿ ಆಚರಿಸಿದ್ದಾರೆ.

ಪಟ್ಟಣದ ಪುರಸಭೆಗೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅತ್ಯಂತ ಸರಳವಾಗಿ ಜಯಂತಿ ಆಚರಿಸಲಾಗಿದೆ. ಅದೇ ರೀತಿ ಪುರಸಭೆ ಕಚೇರಿ, ತಾಲೂಕು ಪಂಚಾಯ್ತಿ, ತಾಲೂಕು ಆರೋಗ್ಯ ಕೇಂದ್ರ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಫೋಟೋ ಪೂಜೆ ಮಾಡುವ ಮೂಲಕ ಜಯಂತಿ ಆಚರಿಸಲಾಗಿದೆ.

ತಾಲೂಕು ಆರೋಗ್ಯ ಕೇಂದ್ರ, ಸಿಂದಗಿ

ಚಿಕ್ಕಸಿಂದಗಿ

ಇನ್ನು ತಾಲೂಕಿನ ಚಿಕ್ಕ ಸಿಂದಗಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನ ಅದ್ಧೂರಿಯಾಗಿ ಆಚರಿಸಲಾಯಿತು. ಗ್ರಾಮದ ಸಮಾನ ಮನಸ್ಕರರು ಸೇರಿಕೊಂಡು ಜಯಂತಿ ಆಚರಿಸಿದ್ದಾರೆ. ಗ್ರಾಮಸ್ಥರೆಲ್ಲ ಸೇರಿಕೊಂಡು ಫೋಟೋ ಪೂಜೆ ಮಾಡಿ, ನಂತರ ಸಿಹಿ ಹಂಚಿ ಶುಭ ಕೋರಿದ್ರು. ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷರು, ಗ್ರಾಮ ಪಂಚಾಯ್ತಿ ಸದಸ್ಯರು, ನಿಜ ಶರಣ ಅಂಬಿಗರ ಚೌಡಯ್ಯ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ರು.

ಚಿಕ್ಕಸಿಂದಗಿ ಗ್ರಾಮದಲ್ಲಿ

ಆಲಮೇಲ

ತಾಲೂಕಿನ ಆಲಮೇಲ ಗ್ರಾಮದಲ್ಲಿರುವ ಸಮುದಾಯ ಆರೋಗ್ಯದಲ್ಲಿ ಚೌಡಯ್ಯನವರ ಜಯಂತಿಯನ್ನ ಆಚರಿಸಲಾಗಿದೆ. ಆಸ್ಪತ್ರೆಯಲ್ಲಿ ಫೋಟೋ ಪೂಜೆ ಮಾಡುವ ಮೂಲಕ ಗೌರವ ಸಲ್ಲಿಸಲಾಗಿದೆ. ಈ ವೇಳೆ ವೈದ್ಯಾಧಿಕಾರಿ ಶ್ರೀಕಾಂತ ದುಮಗೊಂಡ, ಕಿರಿಯ ತಂತ್ರಜ್ಞ ಬಸವರಾಜ ಬಿರದಾರ, ಸ್ಟಾಪ್ ನರ್ಸ್ ಶೇಖರ, ಲಕ್ಷ್ಮಿ ಹಾಗೂ ಬಸವ್ವ ಪಾಟೀಲ, ಸಿದ್ದು ಪಾಟೀಲ, ಶೇಖ ಸಪೂರ ಭಾಗವಹಿಸಿದ್ರು.

ಆಲಮೇಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ

ಮೊರಟಗಿ

ತಾಲೂಕಿನ ಮೊರಟಗಿ ಗ್ರಾಮದಲ್ಲಿರುವ ಜ್ಞಾನಜ್ಯೋತಿ ಶಾಲೆಯಲ್ಲಿ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯ್ತು. ಶಾಲೆಯ ಮುಖ್ಯ ಗುರುಗಳಾದ ಮಡಿವಾಳಪ್ಪ ಹರವಾಳ ಮಾತ್ನಾಡಿ, 12ನೇ ಶತಮಾನದಲ್ಲಿದ್ದ ಜಾತಿ ವ್ಯವಸ್ಥೆ ಅಂಧಾಕಾರವನ್ನ ಹೋಗಲಾಡಿಸಲು ತಮ್ಮ ವಚನಗಳ ಮೂಲಕ ಶ್ರಮಿಸಿದ್ರು ಅಂತಾ ಹೇಳಿದ್ರು. ಎಂ.ಐ ನೇಲಗಿ, ಮಾಲಾಶ್ರೀ ಮಂದೇವಾಲ, ರೇಖಾ ತಳವಾರ, ತಾಜಬಿ ಮುಡ್ಡಿ, ಗುರು ದೇವಣಗಾಂವ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ರು.

ಮೊರಟಗಿ ಜ್ಞಾನಜ್ಯೋತಿ ಶಾಲೆ



Leave a Reply

Your email address will not be published. Required fields are marked *

error: Content is protected !!