ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ನಟ ದರ್ಶನ ವಿರುದ್ಧ ಇಂದ್ರಜಿತ್ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿ ಅವರ ಅಭಿಮಾನಿಗಳು ರಾಜ್ಯಾದ್ಯಂತ ದೂರು ದಾಖಲಿಸಿದ್ದಾರೆ. ದಲಿತ ಪದ ಬಳಸುವ ಮೂಲಕ ಸುಳ್ಳು ಆರೋಪ ಮಾಡಿ ರಾಜ್ಯದಲ್ಲಿ ಕೋಮು ದ್ವೇಷ ಸೃಷ್ಟಿಸಲು ನೋಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ವಿವಿಧ ಕಡೆ ದೂರು ನೀಡಲಾಗಿದೆ.
ಡಿ ಡೈಮೆಂಡ್ಸ್ ಫ್ಯಾನ್ಸ್ ಎಲೆಕ್ಟ್ರಾನಿಕ್ ಸಿಟಿ ಸಂಘ, ಮೈಸೂರು ಜಿಲ್ಲಾ ಡಿ ಬಾಸ್ ಅಭಿಮಾನಿಗಳ ಸಂಘ, ಕೆ.ಆರ್ ಪುರಂನ ಡಿ.ಕಂಪನಿ, ಧಾರವಾಡ ಜಿಲ್ಲೆಯ ಡಿ ಬಾಸ್ ಅಭಿಮಾನಿಗಳ ವತಿಯಿಂದ ಇಂದ್ರಜಿತ್ ವಿರುದ್ಧ ಆಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.