ಸೋಷಿಯಲ್ ಮೀಡಿಯಾದಲ್ಲಿ ವಿವಿಧ ಅಡುಗೆ ಫೋಟೋ: ಖುಷ್ಬೂ ಗರಂ

356

ಕರೋನಾ ಲಾಕ್ ಡೌನ್ ನಿಂದಾಗಿ ಜನರು ಹೊರಗೆ ಬರುವುದು ಕಷ್ಟವಾಗಿದೆ. ಒಂದು ವೇಳೆ ಬಂದ್ರೂ ಮೊದಲಿನ ಪರಿಸ್ಥಿತಿಯಿಲ್ಲ. ಹೀಗಾಗಿ ಕೆಲವರು ಮನೆಯಲ್ಲಿ ವಿವಿಧ ಅಡುಗೆಳನ್ನ ಮಾಡಿಕೊಂಡು ತಿನ್ನುತ್ತಾ ಎಂಜಾಯ್ ಮಾಡ್ತಿದ್ದಾರೆ. ಉಳ್ಳವರು ಹೀಗೆ ಮಾಡ್ತಿರುವ ಅಡುಗೆ ಫೋಟೋ, ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಚಟವಿದೆ.

ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆಯ ಅಡುಗೆ ಮಾಡಿರುವುದು ಹಂಚಿಕೊಳ್ಳುವುದಕ್ಕೆ ಈ ಹಿಂದೆ ಬಿಟೌನ್ ನಿರ್ದೇಶಕಿ ಫರಾಹ್ ಖಾನ ಕಿಡಿ ಕಾರಿದ್ರು. ಇದೀಗ ದಕ್ಷಿಣ ಭಾರತದ ನಟಿ, ರಾಜಕಾರಣಿ ಖುಷ್ಬೂ ಸಹ ಕಿಡಿ ಕಾರಿದ್ದಾರೆ. ಅದೆಷ್ಟೋ ಜನ ಊಟವಿಲ್ಲದೆ ಹಸುವಿನಿಂದ ನರಳುತ್ತಿದ್ದಾರೆ. ಹೀಗಿರುವಾಗ, ನೀವು ಹೀಗೆ ಫೋಟೋ ಹಾಕುವುದು ಸರಿಯಲ್ಲ. ಇಂಥಾ ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಊಟವನ್ನ ಪ್ರದರ್ಶನ ಮಾಡಿ ಇಲ್ಲದವರಿಗೆ ಅವಮಾನ ಮಾಡ್ಬೇಡಿ ಎಂದು ಕಿಡಿ ಕಾರುವ ಮೂಲಕ, ಶೋ ಕೊಟ್ಟಕೊಂಡು ಓಡಾಡುವವರಿಗೆ ಟಾಂಗ್ ಕೊಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!