ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಎನ್ ಸಿಬಿ ನೋಟಿಸ್ ನೀಡಿದೆ. ಹೀಗಾಗಿ ಶನಿವಾರ ನಟಿ ದೀಪಿಕಾ ಸೇರಿದಂತೆ ನಾಲ್ವರು ನಟಿಯರು ವಿಚಾರಣೆಗೆ ಹಾಜರಾಗ್ತಿದ್ದಾರೆ. ಇದರ ನಡುವೆ ಮತ್ತೊಂದು ಸ್ಫೋಟಕ ವಿಷಯ ಬಹಿರಂಗವಾಗಿದೆ.
ಡ್ರಗ್ಸ್ ಸಂಬಂಧಿಸಿದಂತೆ ನಡೆಸುವ ಚಾಟ್ ಗಾಗಿ ಮಾಡಿಕೊಂಡಿದ್ದ ವಾಟ್ಸಪ್ ಗ್ರೂಪ್ ಗೆ ನಟಿ ದೀಪಿಕಾಳಗೆ ಆಡ್ಮಿನ್ ಎಂದು ಹೇಳಲಾಗ್ತಿದೆ. ಜಯ ಶಾ ಎಂಬಾತ ಡ್ರಗ್ಸ್ ವ್ಯವಹಾರದ ಸಂಸ್ಥೆಯ ಮಾಲೀಕನಾಗಿದ್ದು, ದೀಪಿಕಾ ಮ್ಯಾನೇಜರ್ ಕರಿಷ್ಮಾ ಪ್ರಕಾಶ ಇದರಲ್ಲಿನ ಸದಸ್ಯರಲ್ಲಿ ಒಬ್ಬರಾಗಿದ್ದಾಳೆ.