ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಚಂದನವನದಲ್ಲಿ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧಿತವಾಗಿರುವ ನಟಿ ರಾಗಿಣಿ ಆರೋಪಿ ನಂಬರ್ 2 ಆಗಿದ್ದಾರೆ. ಪೊಲೀಸರು 12 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಎ 1 ಶಿವಪ್ರಕಾಶ ಚೆಪ್ಪಿ ಆಗಿದ್ದಾರೆ. ಈತ ರಾಗಿಣಿ ಮೊದಲ ಬಾಯ್ ಫ್ರೆಂಡ್ ಎಂದು ಹೇಳಲಾಗ್ತಿದೆ.
ವೀರನ್ ಖನ್ನಾ 3ನೇ ಆರೋಪಿ, ಆದಿತ್ಯ ಆಳ್ವಾ, ವೈಭವ ಜೈನ್, ಪ್ರಶಾಂತ ರೀಜು, ಲೂಮ್ ಪೆಪ್ಪರ್, ರಾಹುಲು, ಅಭಿ ಸ್ವಾಮಿ, ಅಶ್ವಿನ, ವಿನಯ ಸೇರಿದಂತೆ 12 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.