ತಾಯಿ ನೆನಪುಗಳಿವೆ.. ಮೊಬೈಲ್ ಹುಡುಕಿಕೊಡಿ ಎಂದ ಬಾಲಕಿ..

237

ಪ್ರಜಾಸ್ತ್ರ ಸುದ್ದಿ

ಮಡಿಕೇರಿ: ಕೋವಿಡ್ ನಿಂದ ತಾಯಿಯನ್ನ ಕಳೆದುಕೊಂಡಿರುವ ಬಾಲಕಿ, ಆಕೆಯ ನೆನಪುಗಳಿರುವ ಮೊಬೈಲ್ ಹುಡುಕಿಕೊಡಿ ಎಂದು ಜಿಲ್ಲಾಡಳಿತಕ್ಕೆ ಮನವಿಯೊಂದು ಸಲ್ಲಿಸಿದ್ದಾಳೆ. ಈ ಫೋನ್ ಹಿಂದೆ ಹೃದಯಮಿಡಿಯುವ ಕಥೆಯಿದೆ.

ಕೊಡಗು ಜಿಲ್ಲೆಯ ಕುಶಾಲನಗರದ ನಿವಾಸಿ ನವೀನ, ಪತ್ನಿ ಪ್ರಭಾ ಹಾಗೂ ಮಗಳು ಹೃತೀಕ್ಷಾಗೆ ಕೋವಿಡ್ ಸೋಂಕು ತಗುಲಿದೆ. ಇವರ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರೆ, ಅಪ್ಪನೊಂದಿಗೆ ಮಗಳು ಹೋಮ್ ಕ್ವಾರಂಟೈನ್ ನಲ್ಲಿದ್ರು. ಹೀಗಿರುವಾಗಿ ಕಳೆದ ಮೇ 16ರಂದು ಚಿಕಿತ್ಸೆ ಫಲಿಸದೆ ಪ್ರಭಾ ಸಾವನ್ನಪ್ಪಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ಪ್ರಭಾ ಮೃತದೇಹ ಕೊಟ್ಟಿದ್ದಾರೆ. ಅವರ ಮೊಬೈಲ್ ಹಿಂದಿರುಗಿಸಿಲ್ಲ. ಹೀಗಾಗಿ ಕಳೆದು ಹೋದ ಮೊಬೈಲ್ ನಲ್ಲಿ ನನ್ನ ತಾಯಿಯ ನೆನಪುಗಳಿವೆ. ದಯವಿಟ್ಟು ಹುಡುಕಿಕೊಡಿ ಎಂದು ಜಿಲ್ಲಾಡಳಿತ, ಶಾಸಕರಿಗೆ ಪತ್ರ ಬರೆದಿದ್ದಾಳೆ. ಇದಕ್ಕೆ ಜಿಲ್ಲಾಡಳಿತ ಸ್ಪಂದಿಸಿದ್ದು, ಪೊಲೀಸ್ ಹಾಗೂ ಆರೋಗ್ಯ ಇಲಾಖೆಯಿಂದ ಮೊಬೈಲ್ ಹುಡುಕಿಸುವ ಕೆಲಸ ನಡೆದಿದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!