ತುಂಬಗಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ: ನಾಮಪತ್ರ ಹರಿದ್ನಾ ಅಭ್ಯರ್ಥಿ?

399

ಪ್ರಜಾಸ್ತ್ರ ಸುದ್ದಿ

ತಾಳಿಕೋಟೆ: ತಾಲೂಕಿನ ತುಂಬಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಶುಕ್ರವಾರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದಿದೆ. ಈ ವೇಳೆ ಅಭ್ಯರ್ಥಿಯೊಬ್ಬ ಕೆಲ ದಾಖಲೆಗಳನ್ನು ಹರಿದು ಹಾಕಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ಇಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲು ಆಗಿದೆ. ಇದಕ್ಕೆ ನಿಂಗನಗೌಡ ಚೌಧರಿ ಹಾಗೂ ಶರಣು ಕೊಳ್ಳಿ ಅನ್ನೋ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಶರಣು ಕೊಳ್ಳಿ ಎಂಬುವರು ಕೆಲ ದಾಖಲೆಗಳನ್ನು ಹರಿದು ಹಾಕಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ಅಭ್ಯರ್ಥಿ ತನ್ನ ದಾಖಲೆಗಳನ್ನ ಹರಿದು ಹಾಕಿದ್ದಾನೋ, ಬೇರೆಯವರ ದಾಖಲೆಗಳನ್ನ ಹರಿದು ಹಾಕಿದ್ದಾನೋ ಗೊತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲವೆಂದು ಸ್ಥಳೀಯರು ಹೇಳ್ತಿದ್ದಾರೆ. ಈ ಘಟನೆಯಿಂದಾಗಿ ಚುನಾವಣೆಯನ್ನ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!