ಚಿಕಿತ್ಸೆಗಾಗಿ ಶಿವಣ್ಣ ಲಂಡನ್ ಗೆ

608

ಸ್ಯಾಂಡಲ್ ವುಡ್ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಲಂಡನ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ. ಭುಜದ ನೋವಿನಿಂದ ಬಳಲುತ್ತಿರುವ ನಟ ಶಿವಣ್ಣ, ಜುಲೈ 9ರಂದು ಲಂಡನ್ ಪ್ರಯಾಣ ಬೆಳಸಲಿದ್ದಾರೆ. ಭುಜದ ನೋವಿಗಾಗಿ ಸಣ್ಣದೊಂದು ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ ಅಂತಾ ಹೇಳಲಾಗ್ತಿದೆ.

ಇನ್ನು ಜುಲೈ 12 ಶಿವಣ್ಣನ ಹುಟ್ಟು ಹಬ್ಬ. ಆದ್ರೆ, ಶಿವಣ್ಣ ಲಂಡನ್ ನಲ್ಲಿಯೇ ಒಂದು ತಿಂಗಳು ಇರೋದ್ರಿಂದ ಈ ಬಾರಿ ಬರ್ತ್ ಡೇ ಆಚರಣೆ ಇಲ್ಲ ಎನ್ನಲಾಗ್ತಿದೆ. ಹೀಗಾಗಿ ಶಿವಣ್ಣನ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ. ಇದೇ ಜುಲೈ 12ಕ್ಕೆ ಶಿವಣ್ಣ 57ನೇ ಹುಟ್ಟು ಹಬ್ಬವನ್ನ ಆಚರಿಸಿಕೊಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!