ಲಂಕಾಗೆ 214 ರನ್ ಗಳ ಗುರಿ, ರೋಹಿತ್ 10 ಸಾವಿರ ರನ್ ದಾಖಲೆ

208

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಭಾರತ ತಂಡ ಕೇವಲ 213 ರನ್ ಗಳಿಗೆ ಆಲೌಟ್ ಆಗಿದೆ. ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ರೋಹಿತ್ ಶರ್ಮಾ ಲೆಕ್ಕಾಚಾರ ಉಲ್ಟಾ ಆಗಿದೆ. ಹೀಗಾಗಿ 49.1 ಓವರ್ ಗಳಲ್ಲಿ 213 ರನ್ ಗಳಿಗೆ ಆಲೌಟ್ ಆಗಿದೆ.

ರೋಹಿತ್ ಶರ್ಮಾ 53, ಕೆ.ಎಲ್ ರಾಹುಲ್ 39, ಇಶಾನ್ ಕಿಶನ್ 33, ಅಕ್ಷರ್ ಪಟೇಲ್ 26 ರನ್ ಗಳು ಹೊರತುಪಡಿಸಿ ಎಲ್ಲರೂ ಹೀಗೆ ಬಂದು ಹಾಗೆ ಹೋಗಿದ್ದಾರೆ. ಧುನಿತ್ ವೆಲ್ಲಗ್ 5 ವಿಕೆಟ್ ಪಡೆದು ಮಿಂಚಿದರು. ಚರಿತ್ ಅಸಲಂಕಾ 4 ವಿಕೆಟ್ ಪಡೆದು ಭರ್ಜರಿ ಸಾಥ್ ನೀಡಿದರು. ಮಹೀಶ್ ತೀಕ್ಷಣ್ 1 ವಿಕೆಟ್ ಪಡೆದರು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ 10 ಸಾವಿರ ರನ್ ಗಳ ದಾಖಲೆ ಮಾಡಿದರು. ಭಾರತದ ಪರ 12ನೇ ಆಟಗಾರ ಹಾಗೂ ಒಟ್ಟರೆ 15ನೇ ಆಟಗಾರನಾದರು. ಏಷ್ಯ ಕಪ್ ಟೂರ್ನಿಯ ಸೂಪರ್ 4 ಪಂದ್ಯದಲ್ಲಿ ಈ ಸಾಧನೆ ಮಾಡಿದರು. 241 ಇನ್ನಿಂಗ್ಸ್ ನಲ್ಲಿ 10 ಸಾವಿರ ರನ್ ಪೂರೈಸಿದರು.




Leave a Reply

Your email address will not be published. Required fields are marked *

error: Content is protected !!