ಆಸೀಸ್ ಗೆ 341 ರನ್ ಟಾರ್ಗೆಟ್

403

ರಾಜ್ ಕೋಟ್: ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬಿಗ್ ಸ್ಕೋರ್ ಕಲೆ ಹಾಕಿದೆ. 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 340 ರನ್ ಗಳಿಸಿರುವ ಬ್ಲೂ ಬಾಯ್ಸ್ ಆಸೀಸ್ ಗೆ ಬಿಗ್ ಚಾಲೆಂಜ್ ನೀಡಿದೆ.

ಆರಂಭಿಕ ಆಟಗಾರರಾದ ಶಿಖರ ಧವನ್ 96 ರನ್ ಬಾರಿಸಿ ಔಟ್ ಆಗುವ ಮೂಲಕ ಶತಕ ವಂಚಿತರಾದ್ರು. ರೋಹಿತ ಶರ್ಮಾ 42 ರನ್, ಕ್ಯಾಪ್ಟನ್ ವಿರಾಟ್ ಕೊಹ್ಲಿ 78, ಕನ್ನಡಿಗ ಕೆ.ಎಲ್ ರಾಹುಲ 80 ರನ್ ಬಾರಿಸುವ ಮೂಲಕ ಆರೆನ್ ಪಿಂಚ್ ಬಳಗಕ್ಕೆ ಸವಾಲು ಹಾಕಿದೆ.

ಶ್ರೇಯಸ ಅಯ್ಯರ್ 7, ಮನೀಷ ಪಾಂಡೆ 2 ರನ್ ಗಳಿಸುವ ಮೂಲಕ ಸಿಕ್ಕ ಅವಕಾಶವನ್ನ ಕಳೆದುಕೊಂಡ್ರು. ರವೀಂದ್ರ ಜಡೇಜಾ 20 ರನ್, ಮಹಮ್ಮದ ಶೆಮಿ 1 ರನ್ ಗಳಿಸಿ ನಾಟ್ ಔಟ್ ಉಳಿದ್ರು. ಸ್ಪಿನ್ನರ್ ಆಡಂ ಜಂಪಾ 3 ಹಾಗೂ ರಿಚರ್ಡ್ ಸನ್ 2 ವಿಕೆಟ್ ಪಡೆದು ಮಿಂಚಿದ್ರು.




Leave a Reply

Your email address will not be published. Required fields are marked *

error: Content is protected !!