‘ರಾಯಲ್’ ಗೆಲುವು

315

ಪ್ರಜಾಸ್ತ್ರ ಕ್ರೀಡಾ ಸುದ್ದಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟೀಂ ಭರ್ಜರಿಯಾಗಿ ಗೆಲುವು ದಾಖಲಿಸಿದೆ. 8 ವಿಕೆಟ್ ಗಳ ಅಂತರದಲ್ಲಿ ವಿಜಯ ಸಾಧಿಸಿದೆ.

ಸ್ಮಿತ್ ಪಡೆ ನೀಡಿದ್ದ 154 ರನ್ ಗಳ ಗುರಿಯನ್ನ ಬೆಂಗಳೂರು ಟೀಂ 2 ವಿಕೆಟ್ ಕಳೆದುಕೊಂಡು 158ರನ್ ಬಾರಿಸಿದೆ. ದೇವದತ್ ಪಡಿಕ್ಕಲ್ ಭರ್ಜರಿ 63, ಪಿಂಚ್ 8 ರನ್ ಬಾರಿಸಿ ಔಟ್ ಆದ್ರು. ಮುಂದೆ ಕ್ಯಾಪ್ಟನ್ ಕೊಹ್ಲಿ 72, ಎಬಿಡಿ ವಿಲಿಯರ್ಸ್ 12 ರನ್ ಬಾರಿಸಿ‌ ನಾಟ್ ಔಟ್ ಆಗಿ ಉಳಿದ್ರು. ರಾಜಸ್ಥಾನ್ ಪರ ಆರ್ಚರ್ ಹಾಗೂ ಶ್ರೇಯಸ್ ಗೋಪಾಲ‌ ತಲಾ 1 ವಿಕೆಟ್ ಪಡೆದ್ರು.

ಇನ್ನು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆರ್ ಆರ್, ಬಟ್ಲರ್ 22, ಸ್ಮಿತ್ 5, ಉತ್ತಪ್ಪ 17, ಲೂಮರ್ 47, ಪರಾಗ್ 16, ತೇವಾಟಿಯಾ 24 ಹಾಗೂ ಆರ್ಚರ್ 16 ರನ್ ಬಾರಿಸಿದ್ರು. ಇದ್ರಿಂದಾಗಿ 6 ವಿಕೆಟ್ ನಷ್ಟಕ್ಕೆ 154 ರನ್ ಬಾರಿಸಿದ್ರು. ಬೆಂಗಳೂರ ಪರ ಚಾಹಲ್ 3, ಉದಾನ್ 2 ಹಾಗೂ ಸೈನಿ 1 ವಿಕೆಟ್ ಪಡೆದ್ರು.




Leave a Reply

Your email address will not be published. Required fields are marked *

error: Content is protected !!