ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆ 1 ಓವರ್

327

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾನುವಾರದ ಐಪಿಎಲ್ ಪಂದ್ಯ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ರಸದೌತಣ ನೀಡಿದೆ. ಅಲ್ದೇ, ಆ 1 ಓವರ್ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಹೌದು, ಕಿಂಗ್ಸ್ ಎಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ರನ್ ಮಳೆಯನ್ನೇ ಸುರಿಸಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್ ಆರ್ ಲೆಕ್ಕಾಚಾರ ಉಲ್ಟಾ ಮಾಡಿದವರು ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಹಾಗೂ ಕೆ.ಎಲ್ ರಾಹುಲ. ಮಯಾಂಕ್ 106 ಹಾಗೂ ರಾಹುಲ 69 ರನ್ ಗಳ ನೆರವು, ಮತ್ತೊಂದು ಕಡೆ ಮ್ಯಾಕ್ಸ್ ವೆಲ್ ಮತ್ತು ನಿಕೋಲಸ್ ಅಬ್ಬರದಿಂದಾಗಿ ಬರೋಬ್ಬರಿ 224 ರನ್ ಗಳಿಸಿತು. ಇದನ್ನ ನೋಡಿದ ಕ್ರೀಡಾ ಅಭಿಮಾನಿಗಳು ಸ್ಮಿತ್ ಟೀಂ ಗೆಲ್ಲುವುದು ಕನಸಿನ ಮಾತು ಎಂದಿದ್ರು. ಬಟ್ ಅದನ್ನ ಸುಳ್ಳು ಮಾಡಿದ್ದು ಸ್ಯಾಮ್ಸನ್, ರಾಹುಲ ತೆವಾಟಿಯಾ.

ಆರ್ ಆರ್ ಆರಂಭದಲ್ಲಿಯೇ ಬಟ್ಲರ್(4) ವಿಕೆಟ್ ಕಳೆದುಕೊಂಡಿತು. 2ನೇ ವಿಕೆಟ್ ಜೊತೆಯಾಟದಲ್ಲಿ ಸ್ಯಾಮ್ಸನ್(85) ಹಾಗೂ ಸ್ವೀವ್ ಸ್ಮಿತ್(50) ಒಂದಿಷ್ಟು ಆಸೆಯನ್ನ ಮೂಡಿಸಿದ್ರು. ಈ ಜೋಡಿ ಮುಂದೆ ಬ್ರೇಕ್ ಆಯ್ತು. ಸ್ಯಾಮ್ಸನ್ ಸಹ ಔಟ್ ಆದ. ಆಗ 16.1 ಓವರ್ ಗಳಲ್ಲಿ 161 ರನ್ ಗಳಿಸಿದ್ದ ಆರ್ ಆರ್ 23 ಬೌಲ್ ಗಳಲ್ಲಿ 63 ರನ್ ಬೇಕಿತ್ತು. ರನ್ ಕ್ಕಿಂತ ಹೆಚ್ಚಿನ ಬೌಲ್ ಆಡಿದ್ದ ರಾಹುಲ ತೆವಾಟಿಯಾ, 17ನೇ ಓವರ್ ಮಾಡಲು ಬಂದ ಕಾಟ್ರೇಲ್ ನನ್ನ ಅಕ್ಷರಶಃ ನಡುಗಿಸಿಬಿಟ್ಟ. ಬರೋಬ್ಬರಿ 5 ಸಿಕ್ಸ್ ಗಳನ್ನ ಸಿಡಿಸುವ ಮೂಲಕ ಪಂದ್ಯದ ಗತಿಯನ್ನ ಚೇಜ್ ಮಾಡಿದ. ಈ 1 ಓವರ್ ಐಪಿಎಲ್ ನಲ್ಲಿ ಹೊಸ ಇತಿಹಾಸ ಬರೆಯಿತು.

7 ಸಿಕ್ಸ್ ಸಮೇತ 53 ರನ್ ಬಾರಿಸಿ ತೆವಾಟಿಯಾ ಔಟ್ ಆದ. ಆಗ್ಲೇ ಸ್ಕೋರ್ 222 ಆಗಿತ್ತು. ಇನ್ನೂ 3 ಬೌಲ್ ಗಳು ಇರುವಾಗ್ಲೇ ರಾಜಸ್ಥಾನ್ ರಾಯಲ್ಸ್ ಗೆಲುವಿನ ನಗೆಯನ್ನ ಬೀರಿತು.




Leave a Reply

Your email address will not be published. Required fields are marked *

error: Content is protected !!