ಬಿಗ್ ಬಿ, ಹಶ್ಮಿ ಚಿತ್ರದಿಂದ ಕೃತಿ ಹೊರ ಬಂದಿದ್ದೇಕೆ?

561

ನಟಿ ಕೃತಿ ಕರಬಂದ ಸೌಥ್ ಸಿನಿ ದುನಿಯಾ ಸೇರಿ ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಳ್ತಿದ್ದಾರೆ. ಹೀಗಾಗಿ ಅಲ್ಲಿನ ಸ್ಟಾರ್ ನಟರ ಜೊತೆ ಸ್ಕ್ರೇನ್ ಶೇರ್ ಮಾಡ್ತಿರುವ ನಟಿ, ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಇಮ್ರಾನ್ ಹಶ್ಮಿ ಚಿತ್ರದಿಂದ ಹೊರ ಬಂದಿದ್ದಾರೆ.

ನಟಿ ಕೃತಿ ಹೊರ ಬಂದಿದ್ದಕ್ಕೆ ಆಕೆಯ ಸೊಕ್ಕು ಕಾರಣವೆಂದು ವರದಿಯಾಗಿತ್ತು. ಆದ್ರೆ, ಇದೀಗ ನಿಜವಾದ ಕಾರಣಗಳೇನು ಅನ್ನೋದು ಬಹಿರಂಗಗೊಂಡಿವೆ. ಎರಡು ದಿನ ಚಿತ್ರದ ಶೂಟಿಂಗ್ ನಡೆದಿದೆ. ಬಳಿಕ ನಿರ್ದೇಶಕರು ಲಿಪ್ ಕಿಸ್ ಹಾಗೂ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಬೇಕು ಅಂತಾ ಹೇಳಿದ್ರಂತೆ. ಇದಕ್ಕೆ ನಟಿ ಕೃತಿ ನೋ ಅಂದಿದ್ದಾಳೆ.

ಈ ಮೊದ್ಲು ಲಿಪ್ ಕಿಸ್ ಹಾಗೂ ಇಂಟಿಮೇಟ್ ದೃಶ್ಯಗಳ ಬಗ್ಗೆ ನಿರ್ದೇಶಕರು ಏನೂ ಹೇಳಿರ್ಲಿಲ್ವಂತೆ. ಹೀಗಾಗಿ ಕೃತಿ ಈ ರೀತಿಯ ದೃಶ್ಯಗಳಲ್ಲಿ ತಾನು ಕಾಣಿಸಿಕೊಳ್ಳುವುದಿಲ್ಲವೆಂದು ಹೇಳಿದ್ದಾಳೆ. ಬಳಿಕ ನಿರ್ದೇಶಕ ಹಾಗೂ ನಟಿ ನಡುವೆ ಮಾತುಕತೆ ನಡೆದ್ರೂ ಅದು ಒಪ್ಪಿಗೆಯಾಗಿಲ್ಲ. ಹೀಗಾಗಿ ನಟಿ ಕೃತಿ ಕರಬಂದ ಸಿನ್ಮಾದಿಂದ ಹೊರ ಬಂದಿದ್ದಾಳೆ.




Leave a Reply

Your email address will not be published. Required fields are marked *

error: Content is protected !!